Arecanut Leaf Disease: ಅಡಿಕೆ ಬೆಳೆಗಾರರಿಗೆ ಮತ್ತೇ ಸಂಕಷ್ಟ ಎದುರಾಗಿದ್ದು, ಕಳೆದ 3 ವರ್ಷಗಳಿಂದ ಚಳಿಗಾಲವೇ ಇಲ್ಲದಂತೆ ವರ್ಷವಿಡಿ ಆಗಾಗ್ಗೆ ಮಳೆ ಸುರಿಯುತ್ತಿದೆ. ಹೌದು, ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆಗೆ ಎಲೆ ಚುಕ್ಕಿ ರೋಗ ಮತ್ತೆ ಉಲ್ಬಣಿಸುವಂತೆ ಮಾಡಿದೆ. ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದ ನಂತರ ಮಳೆ ನಿಂತು ಚಳಿಗಾಲದ ಲಕ್ಷಣಗಳು ಕಂಡು ಬರುತ್ತಿತ್ತು.
ಇದೀಗ ಈ ವರ್ಷವೂ ಅಕ್ಟೋಬರ್ ತಿಂಗಳಲ್ಲಿ 200 ಮಿ.ಮೀ ಮಳೆ ಹಾಗೂ ನವೆಂಬರ್‌ನಲ್ಲಿ 100 ಮಿ.ಮೀ ಮಳೆ ದಾಖಲಾಗಿದೆ. ವಾತಾವರಣದಲ್ಲಿನ ತೇವಾಂಶ ಮತ್ತು ಹೆಚ್ಚಿದ ತಾಪಮಾನದಿಂದಾಗಿ ಅಡಿಕೆ ತೋಟದಲ್ಲಿ ಶಿಲೀಂಧ್ರಗಳು ಚುರುಕಾಗಿ, ಈ ಹಿನ್ನೆಲೆ ಕಳೆದ 15 ದಿನದಲ್ಲಿ ಮತ್ತೆ ಎಲೆ ಚುಕ್ಕಿ ರೋಗದ (Arecanut Leaf Disease) ಬಾಧೆ ಶುರು ಆಗಿದೆ.
ಪ್ರಸ್ತುತ ಅಡಿಕೆ ಕೊಯ್ಲು ಕೂಡ ಆರಂಭವಾಗಿದ್ದು, ‘ಕಳೆದ ವರ್ಷದ ಎಲೆಚುಕ್ಕಿ ರೋಗದಿಂದ ಆಗಿರುವ ಹಾನಿಯ ಪರಿಣಾಮ ಫಸಲಿನಲ್ಲಿ ಶೇ 30ರಿಂದ 50 ಕುಸಿತ ಆಗಿದೆ’. ಈಗಾಗಲೇ ತೋಟಗಾರಿಕಾ ಇಲಾಖೆಯು ಕಳೆದ ವರ್ಷದಂತೆ ಈಗಲೂ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿ ಎಂಬ ಸಲಹೆ ನೀಡಿದೆ. ಕೆಲ ಅಡಿಕೆ ಬೆಳೆಗಾರರು ಡ್ರೋನ್ ಬಳಸಿ ಔಷಧಿ ಸಿಂಪಡಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ. ಆದರೆ ಡ್ರೋನ್ ಬಳಸಿ ಔಷಧಿ ಸಿಂಪಡಣೆ ಮಾಡುವುದನ್ನು ಇಲಾಖೆಯು ಶಿಫಾರಸು ಮಾಡಿಲ್ಲ.
ಇದನ್ನೂ ಓದಿ: ಈ ದೇಶದಲ್ಲಿ ಹಾವಿನಿಂದ ಮಾಡಿದ ಪಿಜ್ಜಾಗೇ ಭಾರೀ ಡಿಮ್ಯಾಂಡ್ – ಸ್ನೇಕ್ ಸೂಪ್ ಗಂತೂ ಜನ ಕ್ಯೂ ನಿಲ್ತಾರೆ ?!
