Home » Crime News: ಯುವಕನ ಬರ್ಬರ ಕೊಲೆ; ಕಲ್ಲಿನಿಂದ ಜಜ್ಜಿ ಭೀಕರ ಕೊಲೆ!!!

Crime News: ಯುವಕನ ಬರ್ಬರ ಕೊಲೆ; ಕಲ್ಲಿನಿಂದ ಜಜ್ಜಿ ಭೀಕರ ಕೊಲೆ!!!

0 comments
Bidar Crime News

Bidar Crime News: ಯುವಕನೋರ್ವನನ್ನು ಬೈಕ್‌ನಲ್ಲಿ ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬೀದರ್‌ (Bidar Crime News) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಅಮೀತ್‌ ಮಾನಾಜಿ (35) ಎಂಬಾತನೇ ಹತ್ಯೆಗೊಳಗಾದ ಯುವಕ. ಈ ಘಟನೆ ನಿನ್ನೆ ರಾತ್ರಿ 9.30 ರ ಸುಮಾರಿಗೆ ನಡೆದಿದೆ. ದುಷ್ಕರ್ಮಿಗಳು ಬೈಕ್‌ ಮೇಲೆ ಬರುತ್ತಿದ್ದ ಈತನನ್ನು ತಡೆದು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಜನವಾಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮಿತ್‌ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ. ಒಂದು ಮಗು, ಕೂಡಾ ಇತ್ತು. ಹೆಂಡತಿ, ಮಕ್ಕಳು ತಂದೆ ತಾಯಿ ಎಲ್ಲರೂ ಮೈಸೂರಿನಲ್ಲಿಯೇ ವಾಸವಿದ್ದಾರೆ. ಕೃಷಿ ಮಾಡಬೇಕೆನ್ನುವ ಉದ್ದೇಶದಿಂದ ಲಾಕ್‌ಡೌನ್‌ ಅವಧಿಯಲ್ಲಿ ಬೀದರ್‌ ತಾಲೂಕಿನ ತನ್ನ ತಂದೆಯ ಊರಾದ ವಿಳಾಸಪುರ ಗ್ರಾಮಕ್ಕೆ ಅಮಿತ್‌ ಬಂದಿದ್ದ.

35 ಎಕರೆಯಷ್ಟು ಜಮೀನು ಈತನ ತಂದೆಯದ್ದಾಗಿದ್ದು, ಅದರಲ್ಲಿಯೇ ಕೃಷಿ ಮಾಡಬೇಕು ಎಂಬ ಉದ್ದೇಶವಿದ್ದು, ಎರಡು ವರ್ಷದ ಹಿಂದ ಬಂದಿದ್ದ. ಎರಡು ವರ್ಷದಿಂದ ಟೊಮ್ಯಾಟೋ ತರಕಾರಿ ಬೆಳೆಸಿ ಚೆನ್ನಾಗಿ ಆದಾಯ ಗಳಿಸಿದ್ದ. ಬಿಡುವಿನ ಸಮಯದಲ್ಲಿ ಮೈಸೂರಿಗೆ ಹೋಗಿ ಬರುತ್ತಿದ್ದ. ಆದರೆ ನಿನ್ನೆ ರಾತ್ರಿ ಏಕಾಏಕಿ ಅಮೀತ್‌ ಕೊಲೆಯಾಗಿ ಹೋಗಿದ್ದಾನೆ. ಸಹಜವಾಗಿ ಇದು ಗ್ರಾಮಸ್ಥರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಮೀತ್‌ ಊರವರ ಜೊತೆ ಚೆನ್ನಾಗಿಯೇ ಇದ್ದು, ಊರಿನವರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದ.

ದುಷ್ಕರ್ಮಿಗಳು ಅಮೀತ್‌ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಅಡ್ಡಗಟ್ಟಿ, ಕಲ್ಲಿನಿಂದ ತಲೆ, ಬೆನ್ನಿಗೆ, ಕಾಲಿಗೆ ಜಜ್ಜಿದ್ದಾರೆ. ಬಳಿಕ ಚಾಕುವಿನಿಂದ ಹಿಂಬದಿ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಬಂದು ಕೊಲೆಗಾರ ಸುಳಿವು ಪತ್ತೆ ಹಚ್ಚಲು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: Bengaluru: ರಾತ್ರಿ ವೇಳೆ ಮೂತ್ರ ಮಾಡಲು ಕಾರ್ ನಿಲ್ಲಿಸಿದ ವ್ಯಕ್ತಿ- ಮಂಗಳಮುಖಿಯರಿಂದ ನಡೆದೇ ಬಿಡ್ತು ಘೋರ ಕೃತ್ಯ!!

You may also like

Leave a Comment