Home » Puthila parivar-BJP President: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾದ ಕರಾವಳಿ ‘ಪುತ್ತಿಲ’ ಪಡೆ – ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ !!

Puthila parivar-BJP President: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾದ ಕರಾವಳಿ ‘ಪುತ್ತಿಲ’ ಪಡೆ – ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ !!

1 comment
Puthila parivar-BJP President

Puthila parivar-BJP President: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ ‘ಪುತ್ತಿಲ ಪರಿವಾರ’ ನಾಯಕರು ಇದೀಗ ವಿಜಯೇಂದ್ರರನ್ನು ಭೇಟಿ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಗೊಂದಲ ಸೃಷ್ಟಿ ಮಾಡಿದೆ. ಹೌದು, ಕರ್ನಾಟಕ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡಿರುವ ಹಿನ್ನೆಲೆ ‘ಪುತ್ತಿಲ ಪರಿವಾರ’ ನಾಯಕರು ಶಿವಮೊಗ್ಗದ ನಿವಾಸಕ್ಕೆ ತೆರಳಿ ಭೇಟಿ ಮಾಡಿದರು.

ಪುತ್ತಿಲ ಪರಿವಾರದ ಭೇಟಿ ವೇಳೆ ವಿಜಯೇಂದ್ರರಿಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದ ನಾಯಕರು. ಕೆಲ ಕಾಲ ಪುತ್ತೂರಿನ ವಿದ್ಯಮಾನಗಳ ಬಗ್ಗೆ ವಿಜಯೇಂದ್ರಗೆ ಪುತ್ತಿಲ ಪರಿವಾರ (Puthila parivar-BJP President) ಮಾಹಿತಿ ನೀಡಿದೆ.
ಈ ವೇಳೆ ಅರುಣ್ ಪುತ್ತಿಲಗೆ ಬಿಜೆಪಿಯಲ್ಲಿ ಸ್ಥಾನಮಾನಗಳ ಬಗ್ಗೆ ಚರ್ಚೆ ಮುಂದಾಗಿದ್ದರು, ಆದರೆ ಸದ್ಯಕ್ಕೆ ಆ ಬಗ್ಗೆ ಹೆಚ್ಚು ಚರ್ಚೆ ನಡೆಸದ ವಿಜಯೇಂದ್ರ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮ‌ನ ಹರಿಸೋ ಭರವಸೆ ನೀಡಿದ್ದಾರೆನ್ನಲಾಗಿದೆ. ಇನ್ನು ವಿಜಯೇಂದ್ರ ಭೇಟಿ ವೇಳೆ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕವಾಗ್ತಿದ್ದಂತೆ ಎಲ್ಲವೂ ಬದಲಾಗಿದೆ. ಪುತ್ತಿಲ ಪರಿವಾರದ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಸಂಚಲನ ಸೃಷ್ಟಿಸಿದ್ದಲ್ಲದೆ, ಮುಂದಿನ ಲೋಕಸಭಾ ಚುನಾವಣೆಗೆ ಆರುಣ್ ಪುತ್ತಿಲಗೆ ಬಿಜೆಪಿಯಿಂದಲೇ ಲೋಕಸಭಾ ಟಿಕೆಟ್ ಸಿಗಬಹುದಾ ಎಂಬುದು ಎಲ್ಲರ ಗೊಂದಲವಾಗಿದೆ.

ಇದನ್ನೂ ಓದಿ: ಸ್ನೇಹಿತೆ ಜೊತೆ ಮಾತಾಡಿದನೆಂದು ಜೂನಿಯರ್ ಬೆರಳು ಕತ್ತರಿಸಿದ ಸೀನಿಯರ್ಸ್ !!

You may also like

Leave a Comment