Birth-Death Certificate: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ (Good News)ನೀಡಿದ್ದು, ಇನ್ಮುಂದೆ ಜನನ (Birth-Death Certificate)ಮರಣ ನೋಂದಣಿ ಮಾಡಿಸಲು ಕಚೇರಿಗಳಿಗೆ, ಕೋರ್ಟ್ಗೆ ಅಲೆಯಬೇಕಾಗಿಲ್ಲ. ಇಲ್ಲಿಯವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 12(3) ಅಡಿ ವಿಳಂಬ ತಿದ್ದುಪಡಿ ಸೇರಿದಂತೆ ಯಾವುದೇ ತಗಾದೆಯಿದ್ದರು ಕೂಡ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಇಲ್ಲವೇ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಲು ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಧಿಕಾರವಿರಲಿಲ್ಲ.ಇದೀಗ, ಈ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ!!
ಜನನ, ಮರಣ ನೋಂದಣಿ ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಧಿಕಾರಿಗಳಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಜನನ ಹಾಗೂ ಮರಣ ನೋಂದಣಿಯಲ್ಲಿ ವಿಳಂಬ ನೋಂದಣಿ ಮಾಡಲು ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಧಿಕಾರಿಗೆ ನೀಡಲಾಗಿದೆ. ಜನನ, ಮರಣ ನಡೆದ 21 ದಿನಗಳ ಬಳಿಕ ಮತ್ತು 30 ದಿನಗಳೊಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರೂ. ಬದಲಿಗೆ 1000 ರೂ.ಗೆ 30 ದಿನಗಳ ಬಳಿಕ 5 ರೂ. ಬದಲಿಗೆ 200 ರೂ. 1 ವರ್ಷ ಬಳಿಕ ನೋಂದಣಿಗೆ 10 ರೂ. ಬದಲಿಗೆ 500 ರೂ. ಶುಲ್ಕವನ್ನು ಪರಿಷ್ಕರಿಸಲಾಗಿದೆ. ಜನನ, ಮರಣ ನೋಂದಣಿ ನಿಯಮಗಳು-1999 ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿ ಮಾಡುತ್ತಿರುವ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ
ಇದನ್ನೂ ಓದಿ: ದೀಪಾವಳಿ ದಿನ ದೇಶದ ಜನತೆಗೆ ಭರ್ಜರಿ ಸುದ್ದಿ – ಈ ಅಡುಗೆ ಎಣ್ಣೆಗಳ ಬೆಲೆಯಲ್ಲಿ ಭಾರೀ ಇಳಿಕೆ !!
