Home » Hijab Ban in KEA Exam: KEA ಪರೀಕ್ಷೆಗಳಲ್ಲಿ ಹಿಜಾಬ್ ನಿಷೇಧ – ಸರ್ಕಾರದಿಂದ ಖಡಕ್ ಆದೇಶ

Hijab Ban in KEA Exam: KEA ಪರೀಕ್ಷೆಗಳಲ್ಲಿ ಹಿಜಾಬ್ ನಿಷೇಧ – ಸರ್ಕಾರದಿಂದ ಖಡಕ್ ಆದೇಶ

2 comments
Hijab Ban in KEA Exam

Hijab Ban in KEA Exam : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-KEA) ನಡೆಸುವ ಪರೀಕ್ಷೆ ನವೆಂಬರ್ 18 ಮತ್ತು 19 ರಂದು ನಡೆಯಲಿದ್ದು, ಈ ನಿಟ್ಟಿನಲ್ಲಿ ಬಿಗಿ ನಿಯಮ ಜಾರಿಗೆ ತರಲಾಗಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಿಜಾಬ್ ಧರಿಸುವಂತಿಲ್ಲ (Hijab Ban in KEA Exam)ಎಂದು ಆದೇಶ ನೀಡಲಾಗಿದೆ.

ಈ ನಿಯಮಗಳ ಪಾಲನೆ ಕಡ್ಡಾಯ
# ಅಭ್ಯರ್ಥಿಗಳು ಜೇಬು ಇಲ್ಲದ ಅಥವಾ ಕಡಿಮೆ ಜೇಬು ಇರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
# ಕುರ್ತಾ, ಜೀನ್ಸ್, ಪೈಜಾಮು ಧರಿಸಲು ಅವಕಾಶವಿಲ್ಲ
# ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಹಾಫ್ ಶರ್ಟ್ ಧರಿಸಬೇಕಾಗಿದ್ದು, ಫುಲ್ ಕೈ ಶರ್ಟ್ ಧರಿಸಲು ಅವಕಾಶವಿಲ್ಲ.
# ಅಭ್ಯರ್ಥಿಗಳು ಶೂ ಧರಿಸುವ ಹಾಗಿಲ್ಲ ಬದಲಿಗೆ ಚಪ್ಪಲಿಗಳನ್ನು ಧರಿಸಬೇಕು.
# ಧರಿಸುವ ಬಟ್ಟೆಗಳಲ್ಲಿ ಜಿಪ್ ಪಾಕೆಟ್ ಗಳು, ದೊಡ್ಡ ಬಟನ್ ಇರಬಾರದು.
# ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳು ಅಂದರೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್ ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರಲು ಅವಕಾಶವಿಲ್ಲ.
# ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವಂತಿಲ್ಲ.
# ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.
# ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣ ಧರಿಸುವ ಹಾಗಿಲ್ಲ. ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧ ಹೇರಲಾಗಿದೆ.

ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ಹಿಜಾಬ್ ಹೆಸರನ್ನು ಪ್ರತ್ಯೇಕವಾಗಿ ಹೇಳದೆ ಇದ್ದರೂ ಕೂಡ ತಲೆಯ ಮೇಲೆ ವಸ್ತ್ರ ನಿಷೇಧ ಹೇರಿರುವ ಹಿನ್ನೆಲೆ ಹಿಜಾಬ್ ಧರಿಸಲು (Hijab Ban)ಅವಕಾಶವಿಲ್ಲ ಎನ್ನಬಹುದು. ನವೆಂಬರ್ 18 ಮತ್ತು 19 ರಂದು ರಾಜ್ಯದಲ್ಲಿ ಹಲವಾರು ನೇಮಕಾತಿ ಪರೀಕ್ಷೆಗಳು ನಡೆಯಲಿದ್ದು, ಈ ಸಂದರ್ಭ ಪರೀಕ್ಷಾ ಕೊಠಡಿಯೊಳಗೆ ತಲೆಗೆ ಯಾವುದೇ ಬಟ್ಟೆ, ಟೋಪಿ ಅಥವಾ ತಲೆಗೆ ಕವರ್ ಅಥವಾ ಫೇಸ್ ಕವರ್ ಧರಿಸಲು ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕು. ಈ ಪರೀಕ್ಷೆಯ ಸಂದರ್ಭ ಅಕ್ರಮ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬ್ಲೂಟೂತ್ ಇಯರ್ ಫೋನ್ ಗಳು, ಮೊಬೈಲ್ ಫೋನ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಿಗೆ ನಿಷೇಧ ಹೇರಿದೆ.ಕೆಲ ಬಲ್ಲ ಮೂಲಗಳ ಪ್ರಕಾರ, ಪರೀಕ್ಷಾ ಕೊಠಡಿಯಲ್ಲಿ ಮಂಗಳಸೂತ್ರ ಧರಿಸಲು ಅನುಮತಿ ನೀಡಲಾಗುತ್ತದೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮೀ ಹಣ ಬಾರದವರು ಟೆನ್ಶನ್ ಬಿಟ್ಟು ಈ ಡಾಕ್ಯುಮೆಂಟ್ ರೆಡಿ ಮಾಡಿ – ಇನ್ನು ಮನೆಬಾಗಿಲಿಗೆ ಬರುತ್ತೆ 2,000!!

You may also like

Leave a Comment