Home » Trains Cancelled: ಕರ್ನಾಟಕದಲ್ಲಿ ನ. 15, 16 ರಂದು ಈ ಪ್ರಮುಖ ರೈಲುಗಳ ಸಂಚಾರ ರದ್ದು !!

Trains Cancelled: ಕರ್ನಾಟಕದಲ್ಲಿ ನ. 15, 16 ರಂದು ಈ ಪ್ರಮುಖ ರೈಲುಗಳ ಸಂಚಾರ ರದ್ದು !!

1 comment
Trains Cancelled

Trains cancelled: ರೈಲ್ವೇ ಪ್ರಯಾಣಿಕರೇ ಗಮನಿಸಿ, ಕರ್ನಾಟಕ ವಿವಿಧ ಜಿಲ್ಲೆಗಳಿಗೆ ಸಂಚರಿಸುವ 6 ರೈಲುಗಳ ಸೇವೆಯನ್ನು ನವೆಂಬರ್‌ 15,16ರಂದು ರದ್ದುಪಡಿಸಲಾಗಿದೆ(Trains cancelled).ಆರು ರೈಲುಗಳ ಸಂಚಾರವನ್ನು ಅನಿವಾರ್ಯ ಕಾರಣಗಳಿಂದ ಎರಡು ದಿನದ ಮಟ್ಟಿಗೆ ರದ್ದು ಮಾಡಲಾಗಿದ್ದು(Trains cancelled), ಕಾರ್ಯಾಚರಣೆ ಸಮಸ್ಯೆಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಜೆ.ಲೋಹಿತೇಶ್ವರ ಅವರು ಮಾಹಿತಿ ನೀಡಿದ್ದಾರೆ.

ರೈಲ್ವೇ (Train Service updates)ಕಾರ್ಯಾಚರಣೆಯ ( Operational) ಹಿನ್ನೆಲೆ ಮೈಸೂರಿನಿಂದ( Mysuru) ಚಾಮರಾಜನಗರ( Chamarajanagar), ತುಮಕೂರು(Tumkur), ಶಿವಮೊಗ್ಗ( Shimoga) ನಗರಗಳಿಗೆ ಸಂಚರಿಸಬೇಕಾಗಿದ್ದ ರೈಲುಗಳನ್ನು( Trains) ಎರಡು ದಿನದವರೆಗೆ ರದ್ದು ಮಾಡಲಾಗಿದೆ.ಈಗಾಗಲೇ ಈ ರೈಲುಗಳಿಗೆ ಮುಂಗಡ ಬುಕ್ಕಿಂಗ್‌ ಮಾಡಿಸಿಕೊಂಡಿವರಿಗೆ ಮಾಹಿತಿ ನೀಡಲಾಗುತ್ತಿದೆ.

ನವೆಂಬರ್‌ 15 ರಂದು ಮೈಸೂರಿನಿಂದ ಚಾಮರಾಜನಗರಕ್ಕೆ ಸಂಚರಿಸುವ ರೈಲು ಸಂಖ್ಯೆ 07327 , ಚಾಮರಾಜನಗರದಿಂದ ತುಮಕೂರಿಗೆ ಸಂಚರಿಸುವ ರೈಲು ಸಂಖ್ಯೆ 07345 ಹಾಗೂ ತುಮಕೂರು ನಗರದಿಂದ ಶಿವಮೊಗ್ಗ ನಗರಕ್ಕೆ ಸಂಚರಿಸಬೇಕಾಗಿದ್ದ ರೈಲು ಸಂಖ್ಯೆ 16567 ಸೇವೆ ರದ್ದು ಮಾಡಲಾಗಿದೆ. ನವೆಂಬರ್‌ 16ರಂದು ಶಿವಮೊಗ್ಗ ನಗರದಿಂದ ತುಮಕೂರು ನಗರಕ್ಕೆ ಸಂಚರಿಸುವ ರೈಲು ಗಾಡಿ 16568, ತುಮಕೂರಿನಿಂದ ಚಾಮರಾಜನಗರಕ್ಕೆ ಸಂಚರಿಸುವ ರೈಲು ಗಾಡಿ ಸಂಖ್ಯೆ07346, ಹಾಗೂ ಚಾಮರಾನಗರದಿಂದ ಮೈಸೂರಿಗೆ ತೆರಳುವ ರೈಲು ಗಾಡಿ ಸಂಖ್ಯೆ 07328 ಸೇವೆ ರದ್ದು ಮಾಡಲಾಗಿದೆ.

https://x.com/DrmMys/status/1724045924761317591?s=20

 

ಇದನ್ನು ಓದಿ: Cars With Air Purifier: ದೀಪಾವಳಿ ಧಮಾಕ- ಭಾರೀ ಅಗ್ಗದ ಬೆಲೆಗೆ ಲಭ್ಯವಿದೆ ಈ ಏರ್ ಪ್ಯೂರಿಫೈಯರ್ ಕಾರುಗಳು, ಕ್ಯೂ ನಿಂತ ಗ್ರಾಹಕರು !

You may also like

Leave a Comment