Home » Bengaluru kambala: ಬೆಂಗ್ಳೂರಲ್ಲಿ ಮಂಗ್ಳೂರ ಕಂಬಳ – ಬಂಪರ್ ಅನುದಾನ ಘೋಷಿಸಿದ ಸಿದ್ದರಾಮಯ್ಯ!!

Bengaluru kambala: ಬೆಂಗ್ಳೂರಲ್ಲಿ ಮಂಗ್ಳೂರ ಕಂಬಳ – ಬಂಪರ್ ಅನುದಾನ ಘೋಷಿಸಿದ ಸಿದ್ದರಾಮಯ್ಯ!!

0 comments

Bengaluru kambala: ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಸಂಪ್ರದಾಯಗಳು ಕಳೆಗಟ್ಟಿವೆ. ಇನ್ನೇನು ಕೆಲವೇ ದಿನಗಳಲ್ಲಿ ಕರಾವಳಿಯ ಕಂಬಳ ಕೂಡ ರಾಜ್ಯದಲ್ಲಿ ರಾಜಧಾನಿಯಲ್ಲಿ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಕಂಬಳದ ಏರ್ಪಾಡಿಗೆ ಭರ್ಜರಿ ಅನುದಾನ ಘೋಷಿಸಿದ್ದಾರೆ.

ಹೌದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗಂತೂ ಕರಾವಳಿಯ ಹಲವು ಕಾರ್ಯಕ್ರಮಗಳು ಏರ್ಪಡುತ್ತಿವೆ. ಅಂತೆಯೇ ಇದೀಗ ಇದೇ ಮೊದಲ ಬಾರಿಗೆ ಕರಾವಳಿಯ ಕ್ರೀಡೆ ಕಂಬಳವು (Bengaluru kambala) ಬಹಳ ವಿಜೃಂಭಣೆಯಿಂದ ನೆರವೇರುತ್ತಿದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ.

ಅಂದಹಾಗೆ ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದ್ದು ಅರಮನೆಯ ಮೈದಾನದಲ್ಲಿ ನವೆಂಬರ್ ತಿಂಗಳ 24, 25, 26ರಂದು ಕಂಬಳ ನನಡೆಯಲಿದೆ. ಇಂದಿನಿಂದ ಒಂದು ತಿಂಗಳ ಕಾಲ ಕಂಬಳಕ್ಕಾಗಿ ಟ್ರ್ಯಾಕ್ ಸಿದ್ದಪಡಿಸಲಾಗುತ್ತೆ. 125 ರಿಂದ 150 ಜೊತೆ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕಂಬಳ ಮಾಡಲಾಗುತ್ತಿದೆ.

ವಿಶೇಷ ಅಂದ್ರೆ ಕಂಬಳಕ್ಕೆ ಐಶ್ವರ್ಯಾ ರೈ ಹಾಗೂ ಅನುಷ್ಕಾ ಶೆಟ್ಟಿ ಕೂಡ ಆಗಮಿಸಲಿದ್ದಾರೆ. ಕರಾವಳಿ ಮೂಲದ ಸಿನಿ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆ 5 ಲಕ್ಷ ಮಂದಿ ಕಂಬಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಇದನ್ನು ಓದಿ: Old pension scheme : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – OPS ಜಾರಿಗೆ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್ !! ಈ ತಿಂಗಳಿಂದಲೇ ಜಾರಿ !!

You may also like

Leave a Comment