Home » Vasuki Vaibhav: ʼಮನಸ್ಸಿಂದ ಯಾರೂನು ಕೆಟ್ಟವರಲ್ಲ…ʼ ಖ್ಯಾತಿಯ ವಾಸುಕಿ ವೈಭವ್‌ ದಾಂಪತ್ಯ ಜೀವನ ಶುರು!! ಗಾಯಕನ ಮನಗೆದ್ದ ಆ ಹುಡುಗಿ ಇವರೇ…ಇಲ್ಲಿದೆ ಫೋಟೋಸ್‌!!!

Vasuki Vaibhav: ʼಮನಸ್ಸಿಂದ ಯಾರೂನು ಕೆಟ್ಟವರಲ್ಲ…ʼ ಖ್ಯಾತಿಯ ವಾಸುಕಿ ವೈಭವ್‌ ದಾಂಪತ್ಯ ಜೀವನ ಶುರು!! ಗಾಯಕನ ಮನಗೆದ್ದ ಆ ಹುಡುಗಿ ಇವರೇ…ಇಲ್ಲಿದೆ ಫೋಟೋಸ್‌!!!

by Mallika
2 comments
Vasuki Vaibhav marriage

Vasuki Vaibhav Marriage: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್‌ (Vasuki Vaibhav) ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಬಹುಕಾಲದ ಗೆಳತೆ ಬೃಂದಾ ವಿಕ್ರಮ್‌ (Brunda Vikram) ಅವರ ಜೊತೆ ಇಂದು ಸಪ್ತಪದಿ ತುಳಿಯಲಿದ್ದಾರೆ. ಈ ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ. ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್‌ ಮತ್ತು ಬೃಂದಾ ವಿಕ್ರಮ್‌ (Vasuki Vaibhav Marriage) ಮದುವೆ ಆಗುತ್ತಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಇವರಿಬ್ಬರು, ಇಂದು ಮದುವೆಯಾಗುತ್ತಿದ್ದಾರೆ. ಬೃಂದಾ ವಿಕ್ರಮ್‌ ಅವರು ರಂಗಭೂಮಿ ಹಿನ್ನೆಲೆ ಹೊಂದಿದವರು. ಶಿಕ್ಷಕಿ ಕೂಡಾ ಹೌದು. ಇವರು ಮಾಧ್ಯಮಗಳ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

‘ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ವಾಸುಕಿ ವೈಭವ್​ ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ. ಮದುವೆ ಬಳಿಕ ಆರತಕ್ಷತೆ ಅಥವಾ ಇವೆಂಟ್‌ ಇಲ್ಲ ಎಂದು ಅವರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

 

View this post on Instagram

 

A post shared by Chandrashekar A (@sihikahichandru)

ಇದನ್ನೂ ಓದಿ: Udupi: ನಾಲ್ವರ ಹತ್ಯೆ ಪ್ರಕರಣ; ಉಡುಪಿ ಎಸ್‌.ಪಿ. ನೀಡಿದ್ರು ಬಿಗ್‌ ಅಪ್ಡೇಟ್‌!!!

You may also like

Leave a Comment