B Y Vijayendra: ಬಿ. ವೈ. ವಿಜಯೇಂದ್ರ ಅವರು ಈಗಷ್ಟೇ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದು ಅಭಿಮಾನಿಗಳೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಆದರೀಗ ಈ ಅಧ್ಯಕ್ಷ ಸ್ಥಾನದ ಕುರಿತು ಅಚ್ಚರಿ ಹೇಳಿಕೆ ನೀಡಿರುವ ಬಿಜೆಪಿಯ ಪ್ರಬಲ ನಾಯಕ ಪ್ರಲ್ಹಾದ್ ಜೋಶಿ ಅವರು ವಿಜಯೇಂದ್ರ ಬರೀ ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಕೆಲವು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಲ್ಹಾದ್ ಜೋಶಿಯವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ (BJP State President) ಬಿ.ವೈ. ವಿಜಯೇಂದ್ರ (B Y Vijayendra) ಅವರನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ನಮ್ಮ ರಾಷ್ಟ್ರೀಯ ನಾಯಕತ್ವ ಯುವಕರಿಗೆ ಆದ್ಯತೆ ನೀಡಿದೆ. ವಿಜಯೇಂದ್ರ ಅವರನ್ನು ನಾನು ಅತ್ಯಂತ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಬಿ.ವೈ.ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. 3 ವರ್ಷದ ಬಳಿಕ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಅಲ್ಲದೆ ಬಿ.ಎಸ್. ಯಡಿಯೂರಪ್ಪ ಒಂದು ಜಾತಿ, ಸಮುದಾಯಕ್ಕೆ ಸೀಮಿತರಾದ ನಾಯಕರಲ್ಲ. ಯಡಿಯೂರಪ್ಪ ಪಕ್ಷಾತೀತ ನಾಯಕ. ಎಲ್ಲ ಸಮುದಾಯದವರೂ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಬಿಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ವಿಜಯೇಂದ್ರ ಕೆಲಸ ಮಾಡಲಿದ್ದಾರೆ. ಯಾವದೂ ಬಣ ಇಲ್ಲ. ವಿಜಯೇಂದ್ರ 15 ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಟಿ ರವಿ, ಬೆಲ್ಲದ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ನಾನು ಬೆಲ್ಲದ ಅವರ ಜೊತೆ ಮಾತನಾಡುತ್ತೇನೆ. ಸಣ್ಣ ಪುಟ್ಟ ಅಸಮಾಧಾನ ಇದೆ. ನಾವು ಸರಿ ಮಾಡುತ್ತೇವೆ. ಬಿವೈ ವಿಜಯೇಂದ್ರ ಅವರಿಗೆ ನಾವು ಎಲ್ಲ ಬೆಂಬಲ ಕೊಡುತ್ತೇವೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕಾರಿನ ಮುಂದೆ ಮಹಿಳೆಯ ಹರಸಾಹಸ: ಮೋದಿ ಬೆಂಗಾವಲು ವಾಹನದ ಎದುರು ಏಕಾಏಕಿ ಜಿಗಿದ ಮಹಿಳೆ! ಮುಂದೇನಾಯ್ತು?
