Home » Towel Skirt: ಹೊಸ ಫ್ಯಾಷನ್ ಆಗಿ ಟವೆಲ್ ಸ್ಕರ್ಟ್ ಪರಿಚಯಿಸಿದೆ ಈ ಕಂಪೆನಿ – ರೇಟ್ ಕೇಳಿದ್ರೆ ನೀವಂತೂ ಬಿದ್ದು ಬಿದ್ದು ನಗ್ತೀರಾ!!

Towel Skirt: ಹೊಸ ಫ್ಯಾಷನ್ ಆಗಿ ಟವೆಲ್ ಸ್ಕರ್ಟ್ ಪರಿಚಯಿಸಿದೆ ಈ ಕಂಪೆನಿ – ರೇಟ್ ಕೇಳಿದ್ರೆ ನೀವಂತೂ ಬಿದ್ದು ಬಿದ್ದು ನಗ್ತೀರಾ!!

0 comments
Towel Skirt

Towel Skirt: ಇಂದು ನಾವು ದಿನಂಪ್ರತಿ ನಾನಾ ಬಗೆಯ ಆವಿಷ್ಕಾರಕ್ಕೆ ತೆರೆದುಕೊಂಡಿದ್ದೇವೆ. ವಿಭಿನ್ನ ಪ್ರಯೋಗಗಳ ಫಲವಾಗಿ ಇಂದು ನಮ್ಮ ಅವಶ್ಯಕತೆಯ ಅನುಸಾರ ಅನೇಕ ವಸ್ತುಗಳು ನಮ್ಮ ಕೈ ಸೇರಿದೆ. ಇಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಿನವರೆಗ ಹೊಸ ಫ್ಯಾಷನ್‌ ಟ್ರೆಂಡ್‌ ಆಗುತ್ತಿದೆ. ಫ್ಯಾಷನ್‌ ಕಂಪನಿಗಳು ಕೂಡ ಗ್ರಾಹಕರನ್ನು ಸೆಳೆಯಲು ಕೂಡಾ ವಿಭಿನ್ನ ರೀತಿಯ ಫ್ಯಾಷನ್‌ ಆಕ್ಸೆಸರಿಗಳನ್ನು ಪರಿಚಯಿಸುತ್ತವೆ. ಫ್ರಾನ್ಸ್‌ ಮೂಲದ ಫ್ಯಾಷನ್‌ ಕಂಪನಿಯೊಂದು ಟವೆಲ್‌ ಸ್ಕರ್ಟನ್ನು(Towel Skirt)ಪರಿಚಯಿಸಿದೆ.

ನಾವೆಲ್ಲ ಟವೆಲನ್ನು(Towel)ಸ್ನಾನಕ್ಕೆ ಬಳಕೆ ಮಾಡುವುದು ಸಹಜ. ಫ್ರಾನ್ಸ್‌ ಮೂಲದ ಬಾಲೆನ್ಸಿಯಾಗ ಎಂಬ ಕಂಪನಿ ಟವೆಲ್‌ ಸ್ಕರ್ಟನ್ನು ಪರಿಚಯಿಸಿದೆ. ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತಾ? ಇದರ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!!! ಈ ಟವೆಲ್‌ ಸ್ಕರ್ಟನ್ನು (Towel Skirt)ನೀವು ಒಳ ಉಡುಪಿನ ಮೇಲ್ಭಾಗ ಧರಿಸುವಂತಿಲ್ಲ. ಸೂಪರ್‌ ಮ್ಯಾನ್‌ ರೀತಿ ಪ್ಯಾಂಟ್‌ ಮೇಲೆ ಧರಿಸಬೇಕು. ಸೊಂಟದ ಭಾಗದಿಂದ ಮೊಣಕಾಲಿನವರೆಗೂ ಈ ಟವೆಲ್‌ ಅನ್ನು ಧರಿಸಬಹುದು. ಈ ಟವೆಲ್ ಅನ್ನು ಬೂದು ಬಣ್ಣದಲ್ಲಿ ದೊರೆಯುತ್ತದೆ. ಇದು ಕಾಟನ್‌ ಆಗಿದ್ದು 2 ಬಟನ್‌ಗಳನ್ನು ಹೊಂದಿದೆ. ಇದರ ಬೆಲೆ ಬರೋಬ್ಬರಿ 76,990 ರೂಪಾಯಿಯಾಗಿದ್ದು, ಈ ಬೆಲೆಯಲ್ಲಿ ನಾವು ಟವೆಲ್‌ ಫ್ಯಾಕ್ಟರಿಯನ್ನೇ ಶುರು ಮಾಡಬಹುದಲ್ಲವೇ??

ಸದ್ಯಕ್ಕೆ, ಈ ಟವೆಲ್‌ ಸ್ಕರ್ಟ್‌ ಫೋಟೋಗಳು, ಇದನ್ನು ಧರಿಸಿರುವ ಮಾಡೆಲ್‌ಗಳ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು , ಇದನ್ನು ನೆಟ್ಟಿಗರು ಇದೂ ಒಂದು ಫ್ಯಾಷನಾ? ಎಂದು ಟೀಕಿಸುತ್ತಿದ್ದಾರೆ. ಇಷ್ಟು ಬೆಲೆ ಕೊಟ್ಟು ಟವೆಲ್ ಖರೀದಿಸಬೇಕಾ? ನಮ್ಮಲ್ಲಿ 100 ರೂಪಾಯಿ ಕೊಟ್ಟರೆ ಇಂತಹ ಟವೆಲ್‌ಗಳು ಬೇಕಾದಷ್ಟು ದೊರೆಯುತ್ತವೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವೈರಲ್ ಆಗಿರುವ ಈ ಸುದ್ದಿ ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: Great Khali:ಎರಡನೇ ಮಗುವಿಗೆ ಜನ್ಮ ನೀಡಿದ ಗ್ರೇಟ್ ಖಲಿ ದಂಪತಿ !! ಗಂಡು ಮಗುವಿಗೆ ತಂದೆಯಾದ WWE ಸ್ಪಾರ್ !!

You may also like

Leave a Comment