Home » Rohith sharma: ಕ್ರಿಕೆಟ್’ಗೆ ರೋಹಿತ್ ಶರ್ಮ ವಿದಾಯ ?! ಅಭಿಮಾನಿಗಳಿಗೆ ಶಾಕ್

Rohith sharma: ಕ್ರಿಕೆಟ್’ಗೆ ರೋಹಿತ್ ಶರ್ಮ ವಿದಾಯ ?! ಅಭಿಮಾನಿಗಳಿಗೆ ಶಾಕ್

0 comments
Rohith sharma

Rohith sharma: 2023ರ ವಿಶ್ವ ಕಪ್ ಗೆಲ್ಲುವ ಭಾರತದ ಹಾಗೂ ರೋಹಿತ್ ಶರ್ಮ(Rohith sharma) ನೇತೃತ್ವದ ಸೇನೆಯ ಕನಸು ಭಗ್ನವಾಯಿತು. ಇದರಿಂದ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನೊಂದು ಹೋಗಿದ್ದರು. ಆದರೆ ಈ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು ಟಿ20 ಕ್ರಿಕೆಟ್ ಗೆ ಹಿಟ್ ಮ್ಯಾನ್ ರೋಹಿತ್ ಶರ್ಮ ವಿದಾಯ ಹೇಳುವ ಸುದ್ದಿ ಹೊರಬಿದ್ದಿದೆ.

ಹೌದು, ಅಪಾರ ಅಭಿಮಾನಿಗಳನ್ನು ಗಳಿಸಿರುವ, ಹಿಟ್ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ವಿಶ್ವ ಕಪ್ ನಲ್ಲಿ ಸೋತ ನೋವನ್ನು ಅರಗಿಸಿಕೊಳ್ಳುವ ಮುನ್ನವೇ ಭಾರತೀಯರಿಗೆ ಮತ್ತೊಂದು ಬೇಸರದ ಸುದ್ದಿ ಎದುರಾಗಿದೆ.

ಅಂದಹಾಗೆ 2024ರಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ರೋಹಿತ್‌ ಆಡುವುದು ಬಹುತೇಕ ಅನುಮಾನ. ಏಕದಿನ ಕ್ರಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ ಕಡೆಗಷ್ಟೇ ಹಿಟ್‌ಮ್ಯಾನ್‌ ಇನ್ಮುಂದೆ ಗಮನ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನು ಓದಿ: Sullia: ಸುಳ್ಯದ ಚಿಕನ್‌ ಅಂಗಡಿಯಲ್ಲಿ ನಾಲ್ಕು ಕಾಲುಗಳ ಕೋಳಿ ಪತ್ತೆ!

You may also like

Leave a Comment