Home » Sukesh Cars Auction News: ವಂಚಕ ಸುಕೇಶ್ ಚಂದ್ರಶೇಖರ್ ನ 12 ಐಶಾರಾಮಿ ಕಾರುಗಳ ಹರಾಜು – ಈ ದಿನ ನಿಮಗೂ ಉಂಟು ಕಾರು ಪಡೆಯೋ ಚಾನ್ಸು

Sukesh Cars Auction News: ವಂಚಕ ಸುಕೇಶ್ ಚಂದ್ರಶೇಖರ್ ನ 12 ಐಶಾರಾಮಿ ಕಾರುಗಳ ಹರಾಜು – ಈ ದಿನ ನಿಮಗೂ ಉಂಟು ಕಾರು ಪಡೆಯೋ ಚಾನ್ಸು

1 comment
Sukesh Chandrasekhar

Sukesh Chandrasekhar: ದೇಶದ ಹಲವು ಉದ್ಯಮಿಗಳಿಂದ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಸೆರೆಮನೆವಾಸದಲ್ಲಿರುವ ವಂಚಕ ಸುಕೇಶ್‌ ಚಂದ್ರಶೇಖರ್‌ಗೆ (Conman Sukesh Chandrasekhar) ಸೇರಿದ ಸುಮಾರು 12 ಐಷಾರಾಮಿ ಕಾರುಗಳನ್ನು ಬೆಂಗಳೂರಿನಲ್ಲಿ ಹರಾಜು ನಡೆಸಲು ಆದಾಯ ತೆರಿಗೆ ಇಲಾಖೆ (Income Tax Department) ನಿರ್ಧರಿಸಿದೆ.

ನವೆಂಬರ್‌ 28ರಂದು ಬೆಂಗಳೂರಿನಲ್ಲಿ ಸುಖೇಶ್‌ ಚಂದ್ರಶೇಖರ್‌ ಅವರಿಂದ ವಶಪಡಿಸಿಕೊಂಡಿರುವ ಐಷಾರಾಮಿ ಕಾರುಗಳನ್ನು (Luxury Cars) ಹರಾಜು ಹಾಕಲಾಗುತ್ತದೆ. ಈ ಮೂಲಕ ಜಮೆಯಾದ ಹಣವನ್ನು ಹಲವು ಕಂಪನಿಗಳು ಮತ್ತು ಉದ್ಯಮಿಗಳಿಗೆ ಸುಕೇಶ್‌ ಚಂದ್ರಶೇಖರ್‌ ಅವರು ಉಳಿಸಿಕೊಂಡಿರುವ ಬಾಕಿಯನ್ನು ಪಾವತಿ ಮಾಡಲಾಗುತ್ತದೆ. ಹತ್ತಾರು ಜನರಿಗೆ ವಂಚಿಸಿರುವ ಸುಕೇಶ್‌ ಚಂದ್ರಶೇಖರ್‌ನಿಂದ ಐಟಿ ಇಲಾಖೆ ಅಧಿಕಾರಿಗಳು 308 ಕೋಟಿ ರೂಪಾಯಿಯನ್ನು ವಸೂಲಿ ಮಾಡಬೇಕಾಗಿದ್ದು, ಇದರ ಭಾಗವಾಗಿ ಅವರಿಗೆ ಸೇರಿದ್ದಲ್ಲದೆ, ಜಪ್ತಿ ಮಾಡಿರುವ 12 ಐಷಾರಾಮಿ ಕಾರುಗಳನ್ನು ಹರಾಜಿಗೆ ಇಡಲು ತೀರ್ಮಾನ ಕೈಗೊಳ್ಳಲಾಗಿದೆ.

ಹರಾಜಿಗಿರುವ ಕಾರುಗಳು(Sukesh Cars Auction News) ಹಾಗೂ ಅವುಗಳ ಮೀಸಲು ಬೆಲೆ ಹೀಗಿದೆ:
* ಬಿಎಂಡಬ್ಲ್ಯೂ ಎಂ-5- ಮೀಸಲು ಬೆಲೆ 18.79 ಲಕ್ಷ ರೂ.
* ರೇಂಜ್‌ ರೋವರ್-‌ ಮೀಸಲು ಬೆಲೆ 44.43 ಲಕ್ಷ ರೂ.
* ಜಾಗ್ವಾರ್‌ ಎಕ್ಸ್‌ಕೆಆರ್‌ ಕೂಪ್-‌ 31.07 ಲಕ್ಷ ರೂ.
* ಡುಕಾಟಿ ಡೈವೆಲ್-‌ 3.56 ಲಕ್ಷ ರೂ.
* ಇನೋವಾ ಕ್ರಿಸ್ಟಾ- 11.89 ಲಕ್ಷ ರೂ.
* ನಿಸಾನ್‌ ಟಿಯಾನಾ- 2.03 ಲಕ್ಷ ರೂ.
* ಟೊಯೋಟಾ ಪ್ರ್ಯಾಡೋ-22.50 ಲಕ್ಷ ರೂ.
* ಲ್ಯಾಂಬೋರ್ಗಿನಿ- 38.52 ಲಕ್ಷ ರೂ.
* ರೋಲ್ಸ್‌ ರಾಯ್ಸ್-‌ 1.74 ಕೋಟಿ ರೂ.
* ಬೆಂಟ್ಲೆ- 83.35 ಲಕ್ಷ ರೂ.
* ಟೊಯೋಟಾ ಫಾರ್ಚುನರ್-‌ 15.31 ಲಕ್ಷ ರೂ.
* ಪೋರ್ಶೆ- 5.08 ಲಕ್ಷ ರೂ.

 

ಇದನ್ನು ಓದಿ: Wearing Hijab Row: ದನ ತಿನ್ನುತ್ತೇನೆಂದ ವಿದ್ಯಾರ್ಥಿನಿ- ಶಿಕ್ಷಕನಿಂದ ನಡೆದೇ ಹೋಯ್ತು ಘೋರ ಕೃತ್ಯ !!

You may also like

Leave a Comment