Home » Google Messaging Apps: ಇನ್ಮುಂದೆ ಗೂಗಲ್ ನಲ್ಲೂ ನೀವು ಚಾಟ್ ಮಾಡ್ಬೋದು- ವಾಟ್ಸಪ್ ಎಲ್ಲಾ ಬೇಕಿಲ್ಲಾ ಗುರೂ !!

Google Messaging Apps: ಇನ್ಮುಂದೆ ಗೂಗಲ್ ನಲ್ಲೂ ನೀವು ಚಾಟ್ ಮಾಡ್ಬೋದು- ವಾಟ್ಸಪ್ ಎಲ್ಲಾ ಬೇಕಿಲ್ಲಾ ಗುರೂ !!

0 comments
Google Messaging Apps

Google Messaging Application: ಗೂಗಲ್ (Google)ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ (Google Messaging Application)ಹಲವು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಗೂಗಲ್ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದ್ದು, ಇದನ್ನು ವಾಯ್ಸ್ ನೋಟ್ (Voice Note)ಎಂದು ಕರೆಯಲಾಗಿದೆ. ಈ ವಿಶೇಷತೆಯ ಮೂಲಕ ಬಳಕೆದಾರರಿಗೆ ಸಣ್ಣ ಸಂದೇಶಗಳನ್ನು ರೆಕಾರ್ಡ್ ಹಾಗೂ ಅವುಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್ RCS ಅನ್ನು ಬೆಂಬಲ ನೀಡುತ್ತದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸಂದೇಶಗಳನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ರೆಕಾರ್ಡ್ ಮಾಡಲು ಅನುವು ಮಾಡಿಕೊಡಲಾಗಿದೆ. ಇಲ್ಲಿ ಮೆಸೇಜ್ ಟೈಪ್ ಮಾಡುವ ಬದಲಿಗೆ ವಾಯ್ಸ್ ರೆಕಾರ್ಡ್ ಮಾಡಿದರೆ ಸಾಕು!

ನಾಯ್ಸ್ ಕ್ಯಾನ್ಸಲೇಶನ್ ಫೀಚರ್ (Noice Cancellation Feature) :
Google Message ಅಪ್ಲಿಕೇಶನ್‌ನ ಬೀಟಾ ಆವೃತ್ತಿಗೆ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಅನ್ನು ಸೇರಿಸಲು ಮುಂದಾಗಿದ್ದು, ಈ ವೈಶಿಷ್ಟ್ಯವು ರೆಕಾರ್ಡ್ ಮಾಡಿದ ಸಂದೇಶದಿಂದ ಹಿನ್ನೆಲೆಯಲ್ಲಿ ಕೇಳಿ ಬರುವ ಶಬ್ದ ಅಂದರೆ ಬ್ಯಾಕ್ ಗ್ರೌಂಡ್ ನಾಯ್ಸ್ ಅನ್ನು ತೆಗೆದು ಹಾಕುತ್ತದೆ. ಈ ವೈಶಿಷ್ಟ್ಯವು ಡೆಡಿಕೆಟೆಡ್ ಬಟನ್ ರೂಪದಲ್ಲಿ ಕೆಲಸ ಮಾಡಲಿದ್ದು, ಈ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ, ಆಡಿಯೊ ರೆಕಾರ್ಡಿಂಗ್ ಆರಂಭವಾಗುತ್ತದೆ. ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಕೂಡ ಆಕ್ಟಿವ್ ಆಗಲಿದೆ. ಸದ್ಯ, ಈ ವೈಶಿಷ್ಟ್ಯವು ಟೆಸ್ಟಿಂಗ್ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ.

You may also like

Leave a Comment