ನೆಗೆಟೀವ್ ಆಲೋಚನೆಗಳು ಬೇಗ ಬರ್ತಾವೆ. ಇವತ್ತು ಅಂತಹಾ ಕೆಲ ಉದಾಹರಣೆಗಳನ್ನು ನೋಡೋಣ. ಮಕ್ಕಳ ಚಿಕ್ಕ ಪ್ರಾಯದಲ್ಲಿ ಇರುವಾಗ, ಅತ್ಯಂತ ಪಾಸಿಟಿವ್ ಆಗಿ ಇರ್ತಾರಂತೆ. ಆಮೇಲೆ ಸುತ್ತಮುತ್ತಲ ಸನ್ನಿವೇಶಗಳನ್ನು ವ್ಯಕ್ತಿಗಳನ್ನು ನೋಡಿ ಕಲಿತು ಋಣಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹೇಗೆ ನಮ್ಮ ಮನಸ್ಸು ಕೂದಲು ಕೆಟ್ಟದ್ದನ್ನು ಗ್ರಹಿಸಿ ಅದೇ ಸತ್ಯ ಎಂದು ಭಾವಿಸುತ್ತದೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಫ್ರೆಶ್ ಉದಾಹರಣೆ.
ಇಲ್ಲಿ ನಾವು ನಾಲ್ಕು ಪ್ರಶ್ನೆಗಳನ್ನು ನೀಡುತ್ತಿದ್ದೇವೆ. ಈ ಪ್ರಶ್ನೆಗಳನ್ನು ಕೇಳಿದ ಕೂಡಲೇ ನಿಮ್ಮ ಮನಸ್ಸಿಗೆ ಯಾವ ಉತ್ತರ ಬರುತ್ತದೆ ಅನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದಿಟ್ಟುಕೊಳ್ಳಿ, ಅಥವಾ ಮನಸ್ಸಿನಲ್ಲಿಯೇ ನೋಟ್ ಮಾಡಿಕೊಳ್ಳಿ. ಇದರ ಬಗ್ಗೆ ನಗು ಬಂದರೆ ಮನಸಾರೆ ನಕ್ಕು ಬಿಡಿ. ನೀವು ಅಂದುಕೊಂಡ ಉತ್ತರಕ್ಕೂ ನಾವಿಲ್ಲಿ ಹೇಳಿದ ಉತ್ತರಕ್ಕೂ ತಾಳೆ ಆಗುತ್ತದೆಯಾ ಅಂತ ಕಂಪೇರ್ ಮಾಡಿಕೊಳ್ಳಿ.
1.ಹುಡುಗ ಅಥವಾ ಹುಡುಗಿಯರು, ಏನು ಮಾಡಿದಾಗ ಹೃದಯ ಬಡಿತ ಒಂದು ಸೆಕೆಂಡ್ ಕಾಲ ನಿಂತು ಹೋಗ್ತದೆ ?
2. ಹುಡುಗಿಯರಿಗೆ ಉದ್ದವಾದದ್ದು ಇಷ್ಟ, ಆದ್ರೆ ಹುಡುಗರಿಗೆ ಚಿಕ್ಕದು ಇಷ್ಟ, ಏನದು ?
3. ಏನು ಮಾಡಿದ್ರೆ ಮಕ್ಕಳು ಹೊರಬರುತ್ತವೆ ?
4. ಯಂಗ್ ಇರುವಾಗ ಚೆನ್ನಾಗಿ ಮಾಡುತ್ತೇವೆ, ಆದ್ರೆ ಪ್ರಾಯ ಆದಾಗ ಮಾಡಲು ಆಗೋದಿಲ್ಲ, ಏನದು ? ಉತ್ತರಕ್ಕಾಗಿ ಮುಂದೆ ಓದಿ.
ಉತ್ತರ: 1) ಸೀನು ; 2) ಕೂದಲು; 3) ಸ್ಕೂಲ್ ಬಿಟ್ಟಾಗ ಅಥವಾ ಸ್ಕೂಲ್ ಬೆಲ್ ಹೊಡೆದಾಗ; 4) ಓಟ
ಇದನ್ನು ಓದಿ: ಚಳಿಗಾಲದಲ್ಲಿ ಬಟ್ಟೆ ತೊಡದೇ ಮಲಗಿದ್ರೆ ಒಳಿತಾ, ಹಾಕಿ ಮಲಗಿದ್ರೆ ಒಳಿತಾ?! ಯಾವುದರಿಂದ ದೇಹಕ್ಕೆ ಹೆಚ್ಚು ಪ್ರಯೋಜನ ?
