Home » Free Ration Scheme: ಇಷ್ಟು ವರ್ಷ ಇವರಿಗೆಲ್ಲಾ ಉಚಿತವಾಗಿ ಸಿಗಲಿದೆ ರೇಷನ್- ಕೇಂದ್ರದಿಂದ ಭರ್ಜರಿ ಹೊಸ ಘೋಷಣೆ

Free Ration Scheme: ಇಷ್ಟು ವರ್ಷ ಇವರಿಗೆಲ್ಲಾ ಉಚಿತವಾಗಿ ಸಿಗಲಿದೆ ರೇಷನ್- ಕೇಂದ್ರದಿಂದ ಭರ್ಜರಿ ಹೊಸ ಘೋಷಣೆ

1 comment
Free Ration Scheme

Free Ration Scheme: ಬಡವರ ಪಾಲಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಇನ್ನಷ್ಟು ಕಾಲ ವರದಾನ (Free Ration Scheme) ಆಗಲಿದೆ. ಈಗಾಗಲೇ ದೇಶದೆಲ್ಲೆಡೆ 80 ಕೋಟಿಗೂ ಹೆಚ್ಚು ಬಡ ಜನರಿಗೆ ಪಡಿತರ ವಿತರಣೆ ಮಾಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (PM Garib Kalyan Anna Yojana) 5 ವರ್ಷಕ್ಕೆ ಮುಂದುವರಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಗರೀಬ್ ಕಲ್ಯಾಣ್ ಅನ್ನ ಯೋಜನೆ 2028ರವರೆಗೂ ಲಭ್ಯ ಇರುತ್ತದೆ. ಸದ್ಯ ಈ ಯೋಜನೆ 2023 ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ಆದರೆ ಜನವರಿ 1ರಿಂದ ಈ ಸ್ಕೀಮ್ ಹಾಗೇ ಮುಂದುವರಿಯುತ್ತದೆ ಎಂದು ನವೆಂಬರ್ 29, ಬುಧವಾರದಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಅನುರಾಗ್ ಠಾಕೂರ್ ಈ ವಿಷಯ ತಿಳಿಸಿದ್ದಾರೆ.

2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರಿಗೆಂದು ಹೆಚ್ಚುವರಿಯಾಗಿ 5 ಕಿಲೋ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಆರಂಭಿಸಿತು. ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡುವ ಕೇಂದ್ರದ ಈ ಯೋಜನೆ ವಿಶ್ವಾದ್ಯಂತ ಬಹಳ ದೇಶಗಳಿಗೆ ಮೆಚ್ಚುಗೆ ಪಡೆದಿದೆ.

ಇದನ್ನು ಓದಿ: Putturu: ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ ಪ್ರಕರಣ; ಆರೋಪಿ ಪೊಲೀಸ್‌ ವಶಕ್ಕೆ!

You may also like

Leave a Comment