4
Ration card: ರಾಜ್ಯ ಸರಕಾರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ (Anna Bhagya Yojana)ಜಾರಿಗೆ ತಂದಿದ್ದು, ಸರಕಾರದ ಗ್ಯಾರಂಟಿ ಯೋಜನೆಗಳ ಜಾರಿ ಬಳಿಕ ಜನರು ಮುಗಿಬಿದ್ದು ಪಡಿತರ ಚೀಟಿ(BPL Card) ಪಡೆಯಲು ದುಂಬಾಲು ಬೀಳುತ್ತಿದ್ದಾರೆ. ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೊಸ ರೇಷನ್ ಕಾರ್ಡ್‌ಗೆ (Ration Card)ಅರ್ಜಿ ಸಲ್ಲಿಸಲು ಒಂದು ದಿನದ ಅವಕಾಶ ನೀಡಲಾಗಿದೆ.
ಬೆಂಗಳೂರಿನಲ್ಲಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿಸಲು ಕೇವಲ ಒಂದು ದಿನ ಅವಕಾಶ ಕಲ್ಪಿಸಿದ್ದು, ನಾಗರಿಕರು ಡಿಸೆಂಬರ್ 3ರಂದು ಹೊಸ ರೇಶನ್ ಕಾರ್ಡ್ ಪಡೆಯಲು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಟ್ಟಿರುವ ಆಹಾರ ಇಲಾಖೆ ಪಡಿತರ ಚೀಟಿದಾರರಿಗೆ ಹೊಸ ರೇಷನ್ ಮಾಡಿಸಲು ಒಂದು ದಿನದ ಅವಕಾಶ ನೀಡಲಾಗಿದೆ.
