Home » Israeli Woman: ಇಸ್ರೇಲ್ ಮಹಿಳೆ ಕೇರಳದಲ್ಲಿ ಸಾವು – ಮಲೆಯಾಳಿ ಗಂಡ ಮಾಡಿದ್ದೇನು ?!

Israeli Woman: ಇಸ್ರೇಲ್ ಮಹಿಳೆ ಕೇರಳದಲ್ಲಿ ಸಾವು – ಮಲೆಯಾಳಿ ಗಂಡ ಮಾಡಿದ್ದೇನು ?!

1 comment
Israeli Woman

Israeli Woman: ಕೇರಳದಲ್ಲಿ ಇಸ್ರೇಲ್‌ನ ಮಹಿಳೆಯೊಬ್ಬರ(Israeli Woman) (36) ಶವ ಮನೆಯಲ್ಲಿ ಪತ್ತೆಯಾಗಿದೆ. ಅವರ ಜೊತೆಗೆ ನೆಲೆಸಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಮೃತ ದುರ್ದೈವಿಯನ್ನು ಇಸ್ರೇಲ್‌ ಮೂಲದ ಮಹಿಳೆ ಸ್ವಾತಾ ಅಲಿಯಾಸ್‌ ರಾಧಾ ಎಂಬುದಾಗಿ ಗುರುತಿಸಲಾಗಿದೆ. ಇವರ ಜತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ 70 ವರ್ಷದ ಕೃಷ್ಣ ಚಂದ್ರನ್‌ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಸ್ರೇಲ್‌ನಿಂದ ಭಾರತಕ್ಕೆ ಬಂದಿರುವ ಸ್ವಾತಾ ಹಾಗೂ ಕೃಷ್ಣ ಚಂದ್ರನ್‌ ಜೊತೆಯಾಗಿ ನೆಲೆಸಿದ್ದರು ಎನ್ನಲಾಗಿದೆ.

ಕೃಷ್ಣ ಚಂದ್ರನ್‌ ಯೋಗ ಶಿಕ್ಷಕನಾಗಿದ್ದ ಎನ್ನಲಾಗಿದೆ. ಸ್ವಾತಾ ಅವರು ಇಸ್ರೇಲ್‌ನಿಂದ ಉತ್ತರಾಖಂಡಕ್ಕೆ ಆಗಮಿಸಿ, ಅಲ್ಲಿ 15 ವರ್ಷ ನೆಲೆಸಿದ್ದು, ಕಳೆದ ಒಂದು ವರ್ಷದಿಂದ ಅವರು ಕೇರಳದಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ.ಇಸ್ರೇಲ್‌ ಮಹಿಳೆಯು ಹಲವು ವರ್ಷಗಳಿಂದ ಮಾನಸಿಕ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಕೊಲ್ಲಂ ಜಿಲ್ಲೆಯ ಮುಕ್ತಥಲ ಗ್ರಾಮದಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ವಾತಾ ಹಾಗೂ ಕೃಷ್ಣ ಚಂದ್ರನ್‌ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ, ಕೃಷ್ಣ ಚಂದ್ರನ್‌ ಸ್ವಾತಾ ಅವರ ಕತ್ತು ಸೀಳಿದ್ದು, ಬಳಿಕ ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಹೀಗೆ, ಇಬ್ಬರೂ ಬಿದ್ದಿದ್ದನ್ನು ಕಂಡ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಸ್ವಸ್ಥನಾಗಿರುವ ಕೃಷ್ಣ ಚಂದ್ರನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Rain Alert: ಕರ್ನಾಟಕದ ಈ ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ !!

You may also like

Leave a Comment