Home » Pune: ನಡು ರಸ್ತೆಯಲ್ಲೇ ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಸಲಿಂಗಕಾಮಿ !!

Pune: ನಡು ರಸ್ತೆಯಲ್ಲೇ ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಸಲಿಂಗಕಾಮಿ !!

1 comment
Pune

Pune: ಇತ್ತೀಚೆಗೆ ಸಲಿಂಗಕಾಮದ ಪ್ರಕರಣಗಳು ಯತೇಚ್ಚವಾಗುತ್ತಿದ್ದು, ದುರದೃಷ್ಟವಶಾತ್ ಇವೆಲ್ಲವೂ ಕೊಲೆಯಲ್ಲಿ ಅಂತ್ಯಕಾಣುತ್ತಿವೆ. ಈ ರೀತಿ ಅನೇಕ ಘಟನೆಗಳು ಇತ್ತೀಚೆಗೆ ಸಂಭವಿಸಿದ್ದು, ಇದೀಗ ಮಹರಾಷ್ಟ್ರದಲ್ಲೂ ಇಂತಹ ಒಂದು ಪ್ರಕರಣ ನಡೆದಿದ್ದು, ನಡು ರಸ್ತೆಯಲ್ಲೇ ಸಲಿಂಗಕಾಮಿಯೊಬ್ಬ ವಿದ್ಯಾರ್ಥಿಯನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದಾನೆ.

ಹೌದು, ಮಹಾರಾಷ್ಟ್ರದ ಪುಣೆ(Pune) ನಗರದ ವಾಘೋಲಿ ಪ್ರದೇಶದಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಕೋರ್ಸ್ ಓದುತ್ತಿದ್ದು, ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ 21 ವರ್ಷದ ಬಿಬಿಎ ವಿದ್ಯಾರ್ಥಿಯನ್ನು ಆತನ ಸಲಿಂಗಕಾಮಿ ಸಂಗಾತಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.

ಅಂದಹಾಗೆ ವಿದ್ಯಾರ್ಥಿಯು ಮನೆಯಿಂದ ಹೊರಬಂದಿದ್ದ ವೇಳೆ ಸಲಿಂಗ ಕಾಮಿ ಸಂಗಾತಿ ತಮ್ಮ ಪ್ರೇಮ ಪ್ರಕರಣದ ವಿಚಾರಕ್ಕಾಗಿ ಚಾಕುವಿನಿಂದ ಇರಿದಿದ್ದಾನೆ. ಮೃತ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ವ್ಯಕ್ತಿಯೊಬ್ಬರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಲೋನಿಕಂಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: LPG cylinder price hike : LPG ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ

You may also like

Leave a Comment