Home » BMTC: ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಬಸ್ ಪಾಸ್ ವಿಚಾರದಲ್ಲಿ ಹೊಸ ಘೋಷಣೆ ಹೊರಡಿಸಿದ ಸಾರಿಗೆ ಸಂಸ್ಥೆ

BMTC: ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಬಸ್ ಪಾಸ್ ವಿಚಾರದಲ್ಲಿ ಹೊಸ ಘೋಷಣೆ ಹೊರಡಿಸಿದ ಸಾರಿಗೆ ಸಂಸ್ಥೆ

2 comments
BMTC

BMTC: ಬೆಂಗಳೂರು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಟಿಸಿ (BMTC)ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ವಜ್ರ ಮಾಸಿಕ ಬಸ್‌ ಪಾಸ್‌ (Bus Pass)ವಿತರಣೆ ಮಾಡಲಾಗುತ್ತಿದೆ. ಕಾಲೇಜು ಪ್ರಯಾಣಕ್ಕಾಗಿ ವಿದ್ಯಾರ್ಥಿ ಮಾಸಿಕ ಬಸ್ ಪಾಸ್ ಅನ್ನು ಬಳಕೆ ಮಾಡಬಹುದು.ವಜ್ರ ಮಾಸಿಕ ಬಸ್‌ ಪಾಸ್‌ ಪಡೆಯುವ ವಿದ್ಯಾರ್ಥಿಗಳು ವಜ್ರ ಸೇರಿದಂತೆ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸಬಹುದು.

ಈ ಬಸ್‌ ಪಾಸ್‌ ಪಡೆಯಲು ಬಯಸುವ ವಿದ್ಯಾರ್ಥಿಗಳು ಬಿಎಂಟಿಸಿ ವೆಬ್‌ಸೈಟ್‌ www.mybmtc.karnataka.gov.inನಲ್ಲಿ ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ ಸಂಬಂಧಪಟ್ಟ ಶಾಲೆ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಬೇಕಾಗುತ್ತದೆ. ಬಿಎಂಟಿಸಿಯ ಬಸ್‌ ನಿಲ್ದಾಣಗಳಲ್ಲಿ ದೃಢೀಕೃತ ಅರ್ಜಿಯನ್ನು ಸಲ್ಲಿಸಿ ನಿಗದಿತ ಮೊತ್ತ ಪಾವತಿಸಿ ಪಾಸ್‌ ಪಡೆಯಬಹುದು. ವಜ್ರ ಬಸ್ ಪಾಸ್ ಗೆ ಈಗಾಗಲೇ ಮಾಸಿಕ 1,800 ರೂ ದರವಿದ್ದು, ಈ ಪಾಸ್‌ಗಳನ್ನು ವಿದ್ಯಾರ್ಥಿಗಳಿಗಾಗಿ ₹1,200ಕ್ಕೆ ಪಾಸ್‌ ವಿತರಿಸಲು ತೀರ್ಮಾನ ಕೈಗೊಂಡಿದೆ.

ಈ ಬಸ್ ಪಾಸನ್ನು ಕೆಂಪೇಗೌಡ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ವೈಟ್ ಫೀಲ್ಡ್ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೆಬ್ಬಾಳ, ಕೆಂಗೇರಿ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಕಾಡುಗೋಡಿ ಬಸ್ ನಿಲ್ದಾಣ, ಘಟಕ-೧೯ ಎಲೆಕ್ಟ್ರಾನಿಕ್ ಸಿಟಿ, ಯಲಹಂಕಾ ಹಳೆ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಸರ್ಜಾಪುರ ಬಸ್ ನಿಲ್ದಾಣಗಳಲ್ಲಿ ಪಡೆಯಬಹುದು ಎಂದು ಬಿಎಂಟಿಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: Kolar School Management : 40 ಮಕ್ಕಳನ್ನು ಶಾಲೆಯಲ್ಲೇ ಕೂಡಿ ಹಾಕಿ ವಿಕೃತಿ ಮೆರೆದ ಶಾಲಾ ಆಡಳಿತ ಮಂಡಳಿ – ವಿದ್ಯೆ ನೀಡೋ ಸಂಸ್ಥೆಯೇ ಹೀಗೆ ಮಾಡಿದ್ಯಾಕೆ ?!

You may also like

Leave a Comment