Home » Second Puc Exam Fee: 2nd ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ- ಎಕ್ಸಾಮ್ ಫೀಸ್ ಕಟ್ಟೋ ದಿನಾಂಕ ವಿಸ್ತರಣೆ !!

Second Puc Exam Fee: 2nd ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ- ಎಕ್ಸಾಮ್ ಫೀಸ್ ಕಟ್ಟೋ ದಿನಾಂಕ ವಿಸ್ತರಣೆ !!

5 comments
Second Puc Exam Fee

Second Puc Exam Fee: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ, ಮಾರ್ಚ್ 2024ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಅನುತ್ತೀರ್ಣ ಮತ್ತು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಸಂದಾಯ ಮಾಡಲು(Second Puc Exam Fee) ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಅನುತ್ತೀರ್ಣಗೊಂಡ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು 27-11- 2023 ರವರೆಗೆ, 500+700=1200/- ದಂಡಶುಲ್ಕ ಪಾವತಿ ಮಾಡಿ ಅನುವು ಮಾಡಿಕೊಡಲಾಗಿತ್ತು. ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಸದರಿ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ.

ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ 01-12-2023 ರಿಂದ 12-12-2023ರವರೆಗೆ ಅನುವು ಮಾಡಿಕೊಡಲಾಗಿದೆ. ಶುಲ್ಕದ ಜೊತೆಗೆ ದಂಡಶುಲ್ಕ 500/- ರೂಗಳು ಮತ್ತು 700/- ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ಶುಲ್ಕದ ಜೊತೆಗೆ ದಂಡ ಶುಲ್ಕ ರೂ.500 ಮತ್ತು 700 ರೂ ಹಾಗೂ ವಿಶೇಷ ದಂಡ ಶುಲ್ಕ ರೂ.1,320 ರೂ. ಯಾಗಿದೆ. ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ಮಾಹಿತಿಯನ್ನು PU Exam Portal Login ನಲ್ಲಿ Update ಮಾಡಲು 13.12.2023 ಕೊನೆಯ ದಿನವಾಗಿದೆ.

ಕಾಲೇಜಿನವರು ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಗೆ 15-12-2023 ಸಲ್ಲಿಸಲು ಕೊನೆಯ ದಿನವಾಗಿದೆ. ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU Exam Portal Login ನಲ್ಲಿ Update ಮಾಡಿರುವುದನ್ನು ಖಾತ್ರಿ ಮಾಡಿಕೊಂಡು ಪ್ರಾಂಶುಪಾಲರಿಂದ Update ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ಬಳಿಕ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಶುಲ್ಕ ಪಾವತಿಸಿರುವ ಮೂಲ ಚಲನ್ ಹಾಗೂ ಚೆಕ್ಲಿಸ್ಟ್ ಖುದ್ದಾಗಿ ಕೇಂದ್ರ ಕಛೇರಿಗೆ 18-12-2023 ರಂದು ಸಲ್ಲಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: 8th Pay Commission: 8ನೇ ವೇತನ ಆಯೋಗ ರಚನೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಕೇಂದ್ರ ಸರ್ಕಾರ !!

You may also like

Leave a Comment