Home » Exit polls Result: 3 ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವೇನು ಗೊತ್ತಾ?! ಆರ್ ಅಶೋಕ್ ಬಿಚ್ಚಿಟ್ರು ಸ್ಫೋಟಕ ಕಾರಣ

Exit polls Result: 3 ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವೇನು ಗೊತ್ತಾ?! ಆರ್ ಅಶೋಕ್ ಬಿಚ್ಚಿಟ್ರು ಸ್ಫೋಟಕ ಕಾರಣ

1 comment
Exit polls Result

Exit polls Result: ಪಂಚರಾಜ್ಯಗಳ ಚುನಾವಣಾ ಫಲಿತಾಂಶ(Exit polls Result) ಪ್ರಕಟಗೊಂಡಿದ್ದು, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್(Congress)ಹೀನಾಯ ಸೋಲುಂಡಿದೆ. ಇದರ ಬೆನ್ನಲ್ಲೇ, ಬಿಜೆಪಿ ನಾಯಕ ಆರ್ ಅಶೋಕ್( R. Ashoka)ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದಲ್ಲಿ ಗೆದ್ದ ಬಗ್ಗೆ ಮಾತ್ರ ಕಾಂಗ್ರೆಸ್ ನವರು ಮಾತಾಡುತ್ತಿದ್ದಾರೆ. ಆದರೆ ಅಲ್ಲಿನ ಸಿಎಂ ರೆಸಾರ್ಟ್‌ನಲ್ಲಿ ಕುಳಿತು ರಾಜ್ಯ ಆಳಿದ ಪರಿಣಾಮ ಜನರು ಅವರ ವಿರುದ್ಧ ಮತ ಹಾಕಿದ್ದಾರೆ. ಮೋದಿ ಜೊತೆಗಿದ್ದರೆ ಅಭಿವೃದ್ಧಿ ಸಾಧ್ಯ ಎಂಬ ಸತ್ಯವನ್ನು ಮೂರು ರಾಜ್ಯಗಳ ಜನರು ದೇಶಕ್ಕೆ ಸಂದೇಶ ನೀಡಿದ್ದಾರೆ. ಬಿಜೆಪಿ(BJP )ಈಗ ಮೂರು ರಾಜ್ಯಗಳಲ್ಲಿ ಗೆದ್ದಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೂವತ್ತು ರಾಜ್ಯಗಳಲ್ಲಿ ಗೆಲುವು ಸಾಧಿಸುವುದು ಖಚಿತ.

ಇದನ್ನು ಓದಿ: LED Bulb : LED ಬಲ್ಬ್ ಖರೀದಿಸಲು ನೂರಾರು ರೂಪಾಯಿ ಬೇಕಿಲ್ಲ – ಬರೀ 30ರೂ. ಇದ್ರೆ ಸಾಕು !! ಮಾರ್ಕೆಟ್ ಗೆ ಬಂತು ಹೊಸ ಟ್ರೆಂಡ್

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದೆ. ಈ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ದೇಶ ಗೆಲ್ಲುವುದು ನಿಶ್ಚಿತ. ಅದೇ ರೀತಿ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವ ದೆಸೆಯಲ್ಲಿ ಸನಾತನ ಧರ್ಮವನ್ನು ಅವಹೇಳನ ಮಾಡುವುದನ್ನು ರೂಡಿಸಿಕೊಂಡು ಬರುತ್ತಿತ್ತು. ಹೀಗಾಗಿ, ಪಂಚರಾಜ್ಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಆಸೆ ಆಮಿಷೆ ತೋರಿಸಿ ಗೆಲುವನ್ನು ಸಾಧಿಸಿದೆ. ತೆಲಂಗಾಣದಲ್ಲೂ ಇದೇ ಮಾದರಿ ಅನುಕರಣೆ ಮಾಡಿ ಗೆದ್ದಿದ್ದಾರೆ. ಹಿಂದುಗಳ ಅವಹೇಳನ ಮಾಡುತ್ತ ಬಂದ ಕಾರಣಕ್ಕಾಗಿಯೇ ಉಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ.

ಇದನ್ನು ಓದಿ: Rain Alert Today: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್, ಈ ಪ್ರದೇಶಗಳಲ್ಲಿ ಭಾರೀ ಮಳೆ ಸಂಭವ!! ಈ ಸೇವೆಗಳೆಲ್ಲಾ ರದ್ಧು

You may also like

Leave a Comment