7
Dasa King Maker arrested : ಮೀಡಿಯಾದಲ್ಲಿ (Social Media star) ದೊಡ್ದ ಮಟ್ಟದ ಹವಾ ಹೊಂದಿದ್ದ ಇನ್‌ಫ್ಲುಯೆನ್ಸರ್ (Social Media Influencer) ʻದಾಸ ಕಿಂಗ್ ಮೇಕರ್ʼ (Das King maker) ಅರೆಸ್ಟ್ ಆಗಿದ್ದಾನೆ.
ಬೇರೆಯವರ ಪ್ರಾಪರ್ಟಿ ಗಲಾಟೆಗೆ ಮಧ್ಯ ಪ್ರವೇಶಿಸಿ ಯುವಕರನ್ನು ಕಳುಹಿಸಿಕೊಟ್ಟ ಆರೋಪದಲ್ಲಿ ದಾಸನನ್ನು ಪೊಲೀಸರು (Dasa king Maker Arrest) ಬಂಧಿಸಿದ್ದಾರೆ ಎನ್ನಲಾಗಿದೆ. ಮಹಿಳೆ ಹಾಗೂ ಒಬ್ಬ ವ್ಯಕ್ತಿ ನಡುವೆ ಜಾಗದ ವಿಚಾರಕ್ಕೆ ಗಲಾಟೆ ನಡೆದಿದ್ದು, ಆ ವ್ಯಕ್ತಿ ಇದನ್ನು ಇತ್ಯರ್ಥ ಮಾಡಿಕೊಡುವಂತೆ ದಾಸನ ಮೊರೆ ಹೋಗಿದ್ದನಂತೆ. ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಬಂದು ಹಲ್ಲೆ ನಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ, ದಾಸನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Shotgun: ಗೆಳೆಯನಿಗೆ ಶೂಟ್ ಮಾಡಿ ತಾನೂ ಪ್ರಾಣಬಿಟ್ಟ 14ರ ಸ್ಕೂಲ್ ಹುಡುಗಿ – ಕಾರಣ ಮಾತ್ರ ಭಯಾನಕ!!
