Home » KPTCL Job: KPTCL 1,500 ಹುದ್ದೆಗಳ ಭರ್ತಿ – ಆಯ್ಕೆ ಪಟ್ಟಿ ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ

KPTCL Job: KPTCL 1,500 ಹುದ್ದೆಗಳ ಭರ್ತಿ – ಆಯ್ಕೆ ಪಟ್ಟಿ ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ

1 comment
KPTCL Job

KPTCL Job: ಕೆಪಿಟಿಸಿಎಲ್‌ನ 1500 ವಿವಿಧ ಹುದ್ದೆಗಳ (KPTCL Job) ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಈ ವರ್ಷ ಕೊನೆಯೊಳಗೆ ಪ್ರಕಟಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. ಈಗಾಗಲೇ ಆಯ್ಕೆಯಾಗಿದ್ದ 100 ಅಭ್ಯರ್ಥಿಗಳು ಬಂದಿರಲಿಲ್ಲ. ಹಾಗಾಗಿ ಅವರ ಸ್ಥಾನಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 100 ಜನ ಹೆಚ್ಚುವರಿ ಅಭ್ಯರ್ಥಿಗಳನ್ನು ಪಡೆದು ಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಬಿಜೆಪಿ ಸದಸ್ಯ ಎಸ್‌.ಸುರೇಶ್ ಕುಮಾರ್‌ ಅವರು ಈ ಕುರಿತು , ಕಳೆದ ಜುಲೈನಲ್ಲೇ ಪರೀಕ್ಷೆ ನಡೆಸಿರುವ 1500 ಹುದ್ದೆಗಳಿಗೆ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ಮುಕ್ತಾಯವಾಗಿ ನಾಲ್ಕು ತಿಂಗಳಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲು ಸೂಚಿಸಿದೆ. ಆದರೂ, ಇಲ್ಲಿಯವರೆಗೆ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದರು.

ಇದನ್ನು ಓದಿ: High Court: ಹೆಣ್ಣುಮಕ್ಕಳು 2 ನಿಮಿಷದ ಲೈಂಗಿಕ ಸುಖಕ್ಕೆ ಹಾತೊರೆಯದೆ ನಿಯಂತ್ರಣ ಮಾಡಿ !! ಹೈಕೋರ್ಟ್ ನಿಂದ ಅಚ್ಚರಿ ತೀರ್ಪು- ಸುಪ್ರೀಂ ತರಾಟೆ !!

ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು , ಆಯ್ಕೆಯಾಗಿದ್ದ 100 ಅಭ್ಯರ್ಥಿಗಳು ಬಂದಿರಲಿಲ್ಲ. ಹಾಗಾಗಿ ಅವರ ಸ್ಥಾನಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 100 ಜನ ಹೆಚ್ಚುವರಿ ಅಭ್ಯರ್ಥಿಗಳನ್ನು ಪಡೆದು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಅಥವಾ ಈ ವರ್ಷಾಂತ್ಯದೊಳಗೆ 1500 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

 

You may also like

Leave a Comment