Home » Bigg Boss: ಬಿಗ್ ಬಾಸ್ ಮನೆಯಿಂದ ಹೊರ ಬಂದಳು ಮತ್ತೊಬ್ಬಳು ಕನ್ನಡತಿ – ಹೊರಬರುತ್ತಿದ್ದಂತೆ ಸಾರ್ವಜನಿಕರೆದುರು ಆಗೆಬಿಡ್ತು ದೊಡ್ಡ ಅವಮಾನ !!

Bigg Boss: ಬಿಗ್ ಬಾಸ್ ಮನೆಯಿಂದ ಹೊರ ಬಂದಳು ಮತ್ತೊಬ್ಬಳು ಕನ್ನಡತಿ – ಹೊರಬರುತ್ತಿದ್ದಂತೆ ಸಾರ್ವಜನಿಕರೆದುರು ಆಗೆಬಿಡ್ತು ದೊಡ್ಡ ಅವಮಾನ !!

1 comment
Bigg Boss

Bigg Boss: ಕನ್ನಡದ ಕಿರುತೆರೆ ಶೋಭಾ ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ 14 ವಾರಗಳ ಉಳಿದು ಇದೀಗ ಎಲಿಮಿನೇಟ್ ಆಗಿದ್ದು ಅವರು ಹೊರಗಡೆ ಬಂದ ನಂತರ ಕಹಿ ಅನುಭವ ಅನುಭವಿಸಿದ್ದಾರೆ. ಹೌದು, ಬಿಗ್ ಬಾಸ್ (Bigg Boss) ತೆಲುಗು ಸೀಸನ್ 7 ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ನಿನ್ನೆ ವಾರದ ಪಂಚಾಯಿತಿಯಲ್ಲಿ ಶಿವಾಜಿ ಮತ್ತು ಶೋಭಾ ಡೇಂಜರ್‌ ಜೋನ್‌ನಲ್ಲಿದ್ದರು. ಅದರಲ್ಲಿ ಕನ್ನಡದ ಕಿರುತೆರೆ ಶೋಭಾ ಎಲಿಮಿನೇಟ್ ಆಗಿದ್ದಾರೆ.

ದೊಡ್ಮನೆಯಿಂದ ಹೊರ ಬಂದ ಶೋಭಾ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಆದರೆ ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಕಹಿ ಅನುಭವವೂ ಸಹ ನಡೆದಿದ್ದು ಸದ್ಯ ವಿಡಿಯೋ ವೈರಲ್‌ ಆಗಿದೆ..

ಶೋಭಾ ಶೆಟ್ಟಿ ಮನೆಯಲ್ಲಿ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರು. ತಮ್ಮ ಮಾತಿನ ಬಾಣಗಳಿಂದಲೇ ಎಲ್ಲರನ್ನು ತಿವಿಯುತ್ತಿದ್ದ ಶೋಭಾ ಶೆಟ್ಟಿ ಅವರ ವರ್ತನೆ ನೆಗೆಟಿವಿಟಿಯಿಂದ ಆವರಿಸಿತ್ತು. ಹಲವು ಬಾರೀ ಎಲಿಮಿನೇಷನ್‌ನಿಂದ ಸೇವ್‌ ಆದ ಶೋಭಾಳನ್ನು ಉಳಿಸಿಕೊಳ್ಳಲು ಕೆಲವು ಟಾಪ್ ಸ್ಪರ್ಧಿಗಳನ್ನು ಹೊರಕಳಿಸಲಾಗಿದೆ ಎನ್ನಲಾಗಿತ್ತು.

ಇದನ್ನು ಓದಿ: Tape worm: ವೈದ್ಯ ಲೋಕವೇ ಬಿಚ್ಚಿಬಿದ್ದ ಪ್ರಕರಣ- ವ್ಯಕ್ತಿಯ ಮೆದುಳು, ಎದೆಯಲ್ಲಿ 700ಕ್ಕೂ ಹೆಚ್ಚು ಹುಳುಗಳು ಪತ್ತೆ!! ಹೊಕ್ಕಿದ್ದಾದ್ರೂ ಹೇಗೆ ಗೊತ್ತೆ ?!

ಇದೀಗ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ಮೆರವಣಿಗೆ ಮೂಲಕ ಮನೆಗೆ ತೆರಳುತ್ತಿದ್ದ ಶೋಭಾ ಶೆಟ್ಟಿ ಅವರಿಗೆ ಕಹಿ ಅನುಭವವಾಗಿದೆ. ಕಾರಿನಲ್ಲಿದ್ದ ಶೋಭಾ ಅವರಿಗೆ ಒಬ್ಬ ವ್ಯಕ್ತಿ “ಯಾವಾಗಲೋ ಹೊರ ಬರಬೇಕಿತ್ತೋ ಅದು ಈಗ ಬಂದಿದೆ” ಎಂದು ಜೋರಾಗಿ ಕೂಗಿದ್ದಾರೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಶೋಭಾ ನಗುಮುಖದಿಂದ ಹೊರಟು ಹೋಗಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ..

You may also like

Leave a Comment