Home » Bengaluru: 55 ಲಕ್ಷ ಮೌಲ್ಯದ ಚಿನ್ನ ಸಾಗಿಸಿ ಸಿಕ್ಕಿಬಿದ್ದ ಮಹಿಳೆ- ಎಲ್ಲಿ ಇಟ್ಕೊಂಡಿದ್ಲು ಎಂದು ತಿಳಿದರೆ ನೀವೇ ಬೆಚ್ಚಿಬೀಳ್ತೀರಾ !!

Bengaluru: 55 ಲಕ್ಷ ಮೌಲ್ಯದ ಚಿನ್ನ ಸಾಗಿಸಿ ಸಿಕ್ಕಿಬಿದ್ದ ಮಹಿಳೆ- ಎಲ್ಲಿ ಇಟ್ಕೊಂಡಿದ್ಲು ಎಂದು ತಿಳಿದರೆ ನೀವೇ ಬೆಚ್ಚಿಬೀಳ್ತೀರಾ !!

1 comment
Bengaluru

Bengaluru: ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಅನೇಕರು ಅಕ್ರಮವಾಗಿ ಚಿನ್ನು ಸಾಗಿಸಿ ಸಿಕ್ಕಿ ಬೀಳುವುದನ್ನು ನಾವು ನೋಡಿದ್ದೇವೆ. ಅದರಲ್ಲಿಯೂ ಅವರು ಚಿನ್ನ ಸಾಗಿಸಲು ಉಪಯೋಗಿಸುವಂತಹ ವಿವಿಧ ಕ್ರಮಗಳನ್ನು ನೋಡಿದರೆ ಎಂತವರೂ ಶಾಕ್ ಆಗುತ್ತಾರೆ. ಅಂತೆಯೇ ಇದೀಗ ಇಲ್ಲೊಬ್ಬಳು ಮಹಿಳೆ ಸುಮಾರು 55 ಲಕ್ಷದಷ್ಟು ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದು ತಗಲಾಕೊಂಡಿದ್ದಾಳೆ. ಆದ್ರೆ ಆ ಚಿನ್ನವನ್ನು ಆಕೆ ಎಲ್ಲಿ ಇಟ್ಟುಕೊಂಡಿದ್ದಳು ಎಂಬುದನ್ನು ತಿಳಿದರೆ ನೀವೇ ಬೆಚ್ಚಿ ಬೀಳುತ್ತೀರಿ.

ಹೌದು, ಬೆಂಗಳೂರಿನ(Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಮಹಿಳೆಯೊಬ್ಬಳು ಚಿನ್ನ ಸಾಗಿಸುತ್ತಿದ್ದು ಕಸ್ಟಮ್ಸ್ ಅಧಿಕಾರಿಗಳ (Customs Officers) ಕಾರ್ಯಾಚರಣೆ ನಡೆಸಿ ಅವಳನ್ನು ಬಂದಿಸಿದ್ದಾರೆ.

ಇದನ್ನು ಓದಿ: D K Shivkumar-Mallikharjun Kharge: ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ ಅಧ್ಯಕ್ಷರು ಹೀಗೆ ಮಾಡಲು ಏನು ಕಾರಣ !!

ಅಂದಹಾಗೆ ಈ ಕತರ್ನಾಕ್ ಲೇಡಿ ಬರೋಬ್ಬರಿ 55 ಲಕ್ಷ ಮೌಲ್ಯದ 907 ಗ್ರಾಂ ತೂಕದ ಚಿನ್ನ (Gold)ವನ್ನು ತನ್ನ ಒಳ ಉಡುಪಿನೊಳಗೆ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಳು. ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್‍ಗೆ ಆಗಮಿಸಿದ್ದ ಪ್ರಯಾಣಿಕನನ್ನು ಪತಪಾಸಣೆ ಮಾಡಿದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಆಕೆಯನ್ನು ತೀವ್ರ ತಪಾಸಣೆ ನಡೆಸಿದಾಗ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಸೊಂಟದ ನಡುವೆ ಮರೆಮಾಚಿ ಸಾಗಾಟಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

You may also like

Leave a Comment