Parliment Attack: ಇಡೀ ದೇಶವೇ ಬೆಚ್ಚಿ ಬೆಳಿಸುವಂತಹ ಸುದ್ದಿ ದೆಹಲಿಯಿಂದ ಬಂದಿದೆ. ರಾಷ್ಟ್ರದ ಎಲ್ಲಾ ವಿಚಾರಗಳು ಚರ್ಚೆ ನಡೆಯುವ, ಸಂವಿಧಾನದ ಸದನ ಎಂದೇ ಖ್ಯಾತಿಯಾಗಿರುವ, ಅತೀ ದೊಡ್ಡ ಪ್ರಜಾಪ್ರಭುತ್ವದ ದೇಗುಲ ಎಂದೇ ಬಿಂಬಿತವಾದ ಸಂಸತ್ ಭವನದ ಮೇಲೆ ಇಂದು ದಾಳಿ(Parliament Attack) ನಡೆದಿದ್ದು ಇಡೀ ದೇಶದ ಜನರನ್ನು ಬೆಚ್ಚಿ ಬೆಳಿಸಿದೆ. ಇದೀಗ ದಾಳಿ ಮಾಡಿದವರು ಯಾರೆಂದು ಗುರುತು ಪತ್ತೆ ಹಚ್ಚಲಾಗಿದೆ.
ಹೌದು, ಸಂಸತ್ ಕಲಾಪ ನಡೆಯುವ ವೇಳೆ ವೀಕ್ಷಕರ ಗ್ಯಾಲರಿಯಿಂದ ಕೆಳಗೆ ಹಾರಿದ ಇಬ್ಬರು ಯುವಕ ಯುವತಿಯರು ಸಂಸತ್ತಿನ ಒಳಗೆ ದಾಳಿಯನ್ನು ನಡೆಸಿದ್ದಾರೆ. ಒಳಗಡೆ ಬಣ್ಣದ ಹಾಗೂ ಕೆಮಿಕಲ್ ಪಟಾಕಿಯನ್ನು ಸಿಡಿಸುವ ಮೂಲಕ ಗಲಭೆಯನ್ನು ಎಬ್ಬಿಸಿ ಇಡೀ ದೇಶ ಕಂಡು ಕೇಳರಿದಂತಹ ಘಟನೆಗೆ ಸಾಕ್ಷಿಯಾಗಿದ್ದಾರೆ. ಇದೀಗ ಇವರು ಯಾರೆಂದು ಭದ್ರತಾ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.
ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಇಬ್ಬರು ಪಾಸ್ ಪಡೆದಿದ್ದಾರೆ. ಸಾಗರ್ ಶರ್ಮಾ ಹೆಸರಿನಲ್ಲಿ ಯುವಕ ಪಾಸ್ ಪಡೆದುಕೊಂಡಿದ್ದಾನೆ. ಮತ್ತೊಬ್ಬ ಯುವತಿ ನೀಲಂ ಕೌರ್ ಇಬ್ಬರು ದಾಳಿ ನಡೆಸಿದ್ದಾರೆ. ಮೈಸೂರಿನವರು ಎಂದು ಪಾಸ್ ಪಡೆದ ಇಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ದಾಳಿಕೋರರು,ಸದನದ ಒಳಗೆ ನುಗ್ಗಿದ್ದಾರೆ. ಬಳಿಕ ಶೂ ಒಳಗಡೆ ಇಟ್ಟಿದ್ದ ಕೆಮಿಕಲ್ ಸ್ಪ್ರೇ ಸಿಂಪಡಿಸಿದ್ದಾರೆ. ದಾಳಿಯಿಂದ ಸಂಸದರು, ಸಿಬ್ಬಂದಿಗಳು, ಸ್ಪೀಕರ್ ಆತಂಕಗೊಂಡಿದ್ದಾರೆ. ತಕ್ಷಣವೇ 2 ಗಂಟೆ ವರೆಗೆ ಸದನ ಮುಂದೂಡಲಾಗಿದೆ.
ಅಂದಹಾಗೆ ದಾಳಿ ನಡೆಸಿದವರನ್ನು ಸಾಗರ್ ಶರ್ಮಾ ಮತ್ತು ನೀಲಂ ಕೌರ್ ಎಂದು ಗುರುತಿಸಲಾಗಿದೆ. ಇವರು ಮಹರಾಷ್ಟ್ರ ಮತ್ತು ಹರಿಯಾಣ ಮೂಲದವರು ಎಂದು ತಿಳಿದುಬಂದಿದೆ. ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಯುವಕ ಪಾಸ್ ಪಡೆದುಕೊಂಡಿದ್ದಾನೆ. ಮತ್ತೊಬ್ಬ ಯುವತಿ ನೀಲಂ ಕೌರ್ ಇಬ್ಬರು ದಾಳಿ ನಡೆಸಿದ್ದಾರೆ. ಮೈಸೂರಿನವರು ಎಂದು ಪಾಸ್ ಪಡೆದ ಇಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು.
ಇನ್ನು ಕೆಲ ದಿನಗಳ ಹಿಂದಷ್ಟೇ ಯುಎಸ್ ಮೂಲದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೋ ಹರಿಬಿಟ್ಟು ‘2001 ರ ಸಂಸತ್ ದಾಳಿಯ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 13 ರಂದು “ಸಂಸತ್ತಿನ ಅಡಿಪಾಯವನ್ನು ಅಲುಗಾಡಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದರು. ಆತ ನೀಡಿದ ಡೆಡ್ ಲೈನ್ ದಿನವೇ ಹೀಗಾಗಿರುವುದು ನಿಜವಾಗಿಯೂ ಅಚ್ಚರಿ ಉಂಟುಮಾಡಿದ್ದಂತೂ ನಿಜ. ಜೊತೆಗೆ ಈ ಧಾಳಿ ಹಿಂದೆ ಈ ಸಂಘಟನೆಯ ಕೈವಾಡ ಇದೆಯಾ ಎಂಬ ಅನುಮಾನ ಶುರುವಾಗಿದೆ.
