Home » Prathap simha: ಸಂಸತ್ ಒಳಗೆ ನುಗ್ಗಿದವರಿಗೆ ಪಾಸ್ ಕೊಟ್ಟಿದ್ದೆ ನಾನು !! ಕೊನೆಗೂ ಸ್ಪೀಕರ್ ಮುಂದೆ ಎಲ್ಲಾ ಸತ್ಯ ಬಿಚ್ಚಿಟ್ಟ ಪ್ರತಾಪ್ ಸಿಂಹ !!

Prathap simha: ಸಂಸತ್ ಒಳಗೆ ನುಗ್ಗಿದವರಿಗೆ ಪಾಸ್ ಕೊಟ್ಟಿದ್ದೆ ನಾನು !! ಕೊನೆಗೂ ಸ್ಪೀಕರ್ ಮುಂದೆ ಎಲ್ಲಾ ಸತ್ಯ ಬಿಚ್ಚಿಟ್ಟ ಪ್ರತಾಪ್ ಸಿಂಹ !!

1 comment
Prathap simha

Prathap simha: ರಾಷ್ಟ್ರ ರಾಜಧಾನಿಯಲ್ಲಿ ಇಡೀ ದೇಶವೇ ಕಂಡು ಕೇಳರಿಯದಂತಹ ಘಟನೆ ನಡೆದಿದ್ದು ಸಂಸತ್ ಒಳಗಡೆ ನುಗ್ಗಿ ವಿಚಿತ್ರವಾಗಿ ವರ್ತಿಸಿರುವುದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅದು ಅಲ್ಲದೆ ನಮ್ಮ ರಾಜ್ಯದ ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ(Prathap shimha) ಅವರ ಪಾಸ್ ಮೂಲಕ ಇವರು ಸಂಸತ್ ಪ್ರವೇಶಿಸಿದ್ದಾರೆ ಎಂಬುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾಗಿ ಈ ಕುರಿತಂತೆ ಎಲ್ಲಾ ವಿಚಾರವನ್ನು ತೆರೆದಿಟ್ಟಿದ್ದಾರೆ.

ಹೌದು, ಅಪರಿಚಿತರು ಸಂಸತ್(Parliament)ಪ್ರವೇಶಿಸಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿದರೆ ಇತ್ತ ಪ್ರತಾಪ್ ಸಿಂಹ ಅವರ ಪಾಸ್ ಪಡೆದು ಯುವಕ – ಯುವತಿ ಸದನದೊಳಗೆ ದಾಳಿ ನಡೆಸಿದ್ದಾರೆ ಎಂಬುದು ಭಾರೀ ಸುದ್ದಿಯಾಗುತ್ತಿದೆ. ಅಲ್ಲದೆ ಇತ್ತ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪ್ರತಾಪ್ ಸಿಂಹ ಅವರ ವಿರುದ್ಧ ಮುಗಿಬಿದ್ದು ರಾಜಿನಾಮೆಗೆ, ತನಿಖೆಗೆ ಆಗ್ರಹಿಸಿವೆ. ಈ ನಡುವೆ ಇದುವರೆಗೂ ಏನೂ ಸ್ಪಷ್ಟೀಕರಣ ನೀಡದ ಪ್ರತಾಪ್ ಸಿಂಹ ಕೊನೆಗೂ ನಿನ್ನೆ ಸಂಡೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಎಲ್ಲಾ ವಿಚಾರ ಹೇಳಿದ್ದಾರೆ ಎನ್ನಲಾಗಿದೆ.

ಪ್ರತಾಪ್ ಸಿಂಹ ಹೇಳಿದ್ದೇನು?
‘ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮಗೆ ಪರಿಚಿತರು. ಅವರು ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು. ಅಲ್ಲದೆ ಸಾಗರ್ ಶರ್ಮಾ, ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಹೀಗಾಗಿ ಪಾಸ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸ್ಪೀಕರ್ ಏನಂದ್ರು?
ಶೂನ್ಯ ವೇಳೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಅಪರಿಚಿತರು ಸದನದ ಒಳಗೆ ಹರಡಿದ್ದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಅಂದಹಾಗೆ ಈ ಸಂಚಿನಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ. ಇಬ್ಬರು ಸದನದ ಒಳಗೆ, ಮತ್ತಿಬ್ಬರು ಸಂಸತ್ತಿನ ಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದರೆ, ಇನ್ನಿಬ್ಬರು ಶಂಕಿತರು ಪರಾರಿಯಾಗಿದ್ದಾರೆ. ಅವರಿಗಾಗಿ ತನಿಖಾ ಏಜೆನ್ಸಿಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.

 

ಇದನ್ನು ಓದಿ: Prathap simha: ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ವಜಾ ?!!

You may also like

Leave a Comment