Home » Shreyas Talpade: ಬಾಲಿವುಡ್ ಖ್ಯಾತ ಯುವ ನಟನಿಗೆ ಹೃದಯಾಘಾತ

Shreyas Talpade: ಬಾಲಿವುಡ್ ಖ್ಯಾತ ಯುವ ನಟನಿಗೆ ಹೃದಯಾಘಾತ

0 comments
Shreyas Talpade

Shreyas Talpade : ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ(Shreyas Talpade)ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ ಮೊದಲಾದ ನಟರ ಜೊತೆಗೆ ತೆರೆ ಹಂಚಿಕೊಂಡು ಮಿಂಚಿದ್ದಾರೆ.

ನಟ ಶ್ರೇಯಸ್ ತಲ್ಪಡೆ (Shreyas Talpade)ಅವರಿಗೆ ಗುರುವಾರ (ಡಿಸೆಂಬರ್ 14) ಸಂಜೆ ಹೃದಯಾಘಾತವಾಗಿದ್ದು, ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಹೊರಡುವ ಸಂದರ್ಭ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ನಂತರ ಹಾರ್ಟ್ ಅಟ್ಯಾಕ್ ಆಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೇಯಸ್ ವೆಲ್ಕಮ್ ಟು ದಿ ಜಂಗಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ, ನಿನ್ನೆ ಸಂಜೆ ವೇಳೆಗೆ ಏಕಾಏಕಿ ಹಾರ್ಟ್ ಅಟ್ಯಾಕ್ ಆಗಿದ್ದು, ಇದಾದ ನಂತರ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ಅವರು ಈಗ ಚೇತರಿಕೆ ಕಾಣುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ, ಶ್ರೇಯಸ್ ವೆಲ್ಕಮ್ ಟು ದಿ ಜಂಗಲ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾದ ವೀಡಿಯೊ ಕೂಡ ವೈರಲ್ ಆಗಿತ್ತು. ಇದರಲ್ಲಿ ಶ್ರೇಯಸ್ ಅಕ್ಷಯ್ ಕುಮಾರ್ ಮತ್ತು ಇತರ ತಾರೆಯರೊಂದಿಗೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿತ್ರದಲ್ಲಿ ವೈರಲ್ ಆಗಿದೆ. 47 ವರ್ಷದ ಶ್ರೇಯಸ್ ಶೂಟಿಂಗ್‌ ಮುಗಿಸಿ ಮನೆಗೆ ಬರುತ್ತಿದ್ದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಾರಿ ನಡುವೆ ಶ್ರೇಯಸ್ ಅವರಿಗೆ ಹೃದಯಾಘಾತಕ್ಕೀಡಾಗಿದ್ದು, ಸದ್ಯ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Good News For Students: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಇನ್ಮುಂದೆ ಇರೋದಿಲ್ಲ ನಿಮಗೆ ಈ ಟೆನ್ಶನ್

You may also like

Leave a Comment