Home » Dhiraj Sahu: IT ದಾಳಿಯಲ್ಲಿ ಪತ್ತೆಯಾದ 351 ಕೋಟಿಯಲ್ಲಿ 1ರೂ ಕೂಡ ನನ್ನದಲ್ಲ, ಎಲ್ಲಾ ಅವರದ್ದು! ಸ್ಫೋಟಕ ಸತ್ಯ ಹೊರಹಾಕಿದ ಕಾಂಗ್ರೆಸ್ ಸಂಸದ!

Dhiraj Sahu: IT ದಾಳಿಯಲ್ಲಿ ಪತ್ತೆಯಾದ 351 ಕೋಟಿಯಲ್ಲಿ 1ರೂ ಕೂಡ ನನ್ನದಲ್ಲ, ಎಲ್ಲಾ ಅವರದ್ದು! ಸ್ಫೋಟಕ ಸತ್ಯ ಹೊರಹಾಕಿದ ಕಾಂಗ್ರೆಸ್ ಸಂಸದ!

2 comments
Dhiraj Sahu

Dhiraj Sahu: ಡಿಸೆಂಬರ್ 6 ರಂದು ಕಾಂಗ್ರೆಸ್ ಸಂಸದ ಧೀರಜ್ ಸಾಹು (Dhiraj Sahu)ಅವರ ಮನೆ ಕಛೇರಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ(IT Raid)ದಾಳಿ ನಡೆಸಿ, ಬರೋಬ್ಬರಿ 351 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಐಟಿ ದಾಳಿಯ ಬಳಿಕ 176 ಚೀಲ ತುಂಬಿದ ನಗದು ವಶಪಡಿಸಿಕೊಳ್ಳಲಾಗಿದೆ. ಐಟಿ ದಾಳಿ ಬಳಿಕ ಇಲ್ಲಿಯವರೆಗೆ ಸೈಲೆಂಟ್ ಆಗಿದ್ದ ಧೀರಜ್ ಸಾಹು ಇದೀಗ ಅಚ್ಚರಿಯ ವಿಚಾರ ರೀವಿಲ್ ಮಾಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಧೀರಜ್ ಸಾಹು, ‘ನಾವು ಹೊಂದಿರುವ ಎಲ್ಲಾ ವ್ಯವಹಾರಗಳು ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದು, ಬಿಜೆಪಿಯವರು ಅದನ್ನು ಯಾವ ರೀತಿಯಲ್ಲಿ ಕಪ್ಪು ಹಣ ಎಂದು ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ.ಈ ಕುರಿತು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಲಿದೆ. ಐಟಿ ದಾಳಿ ವೇಳೆ ಪತ್ತೆಯಾದ ಹಣ ನನ್ನ ಕುಟುಂಬದ ಒಡೆತನದ ಮಧ್ಯದ ಸಂಸ್ಥೆಗೆ ಸೇರಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಬಿಜಿನೆಸ್ ಮಾಡುತ್ತಿಲ್ಲ, ಇದಕ್ಕೆ ನನ್ನ ಕುಟುಂಬದ ಸದಸ್ಯರು ಉತ್ತರ ನೀಡುತ್ತಾರೆ.

ಇದನ್ನು ಓದಿ: Viral vedio: ಮೋದಿ-ಯೋಗಿಯ ಕಾಲ ಮುಗಿಯಲಿ, ರಾಮ ಮಂದಿರ ಒಡೆದು ಅಲ್ಲೇ ಬಾಬ್ರಿ ಮಸೀದಿ ಕಟ್ಟುತ್ತೇವೆ !! ವಿವ್ದಾತ್ಮಕ ಹೇಳಿಕೆ ವೈರಲ್

ನಾನು ಈ ವಿಷಯದಿಂದ ಸಂಪೂರ್ಣವಾಗಿ ದೂರವಿದ್ದು,ನನ್ನ ಕುಟುಂಬ ತುಂಬಾ ದೊಡ್ಡದಿದೆ. ಈ ಹಣಕ್ಕೆ ಸಂಪೂರ್ಣ ಲೆಕ್ಕವನ್ನು ಕುಟುಂಸ್ಥರು ಐಟಿ ಇಲಾಖೆಗೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಯಾವುದೇ ಪಕ್ಷವನ್ನು ದೂಷಿಸುತ್ತಿಲ್ಲ. ಆದರೆ ಈ ಹಣ ಕಾಂಗ್ರೆಸ್ ಪಕ್ಷ ಇಲ್ಲವೇ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಎಂದು ಕುಟುಂಬದ ಮಧ್ಯಸಂಸ್ಥೆಗೆ ಸೇರಿದ್ದು ಎಂದು ನಾನು ಖಚಿತವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

You may also like

Leave a Comment