Home » Tooth Paste:ಹಳೆಯ ಟೂತ್ ಪೇಸ್ಟ್ ಅನ್ನು ಬಿಸಾಡುತ್ತೀರಾ ?! ಈ ಸ್ಟೋರಿ ಓದಿದ್ರೆ ಇಷ್ಟೆಲ್ಲಾ ಲಾಭ ಉಂಟಾ ಎಂದು ಬಿಸಾಡಿದ್ದನ್ನೂ ಎತ್ತಿಡುತ್ತೀರಾ!!

Tooth Paste:ಹಳೆಯ ಟೂತ್ ಪೇಸ್ಟ್ ಅನ್ನು ಬಿಸಾಡುತ್ತೀರಾ ?! ಈ ಸ್ಟೋರಿ ಓದಿದ್ರೆ ಇಷ್ಟೆಲ್ಲಾ ಲಾಭ ಉಂಟಾ ಎಂದು ಬಿಸಾಡಿದ್ದನ್ನೂ ಎತ್ತಿಡುತ್ತೀರಾ!!

0 comments

Tooth Paste: ನಾವು ಹಲ್ಲುಜ್ಜಲು ಬಳಸುವ ಟೂಥ್ ಪೇಸ್ಟ್(Toothpaste)ನಿಂದ ಬರಿ ಹಲ್ಲು ಬಿಳುಪು(.White Teeth)ಆಗುವುದಷ್ಟೆ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಟೂತ್ ಪೇಸ್ಟ್ ನಿಂದ ಆಗುವ ಅನುಕೂಲಗಳ(Cleaning Tips)ಬಗ್ಗೆ ತಿಳಿದರೆ ನೀವೂ ಶಾಕ್ ಆಗೋದು ಗ್ಯಾರಂಟಿ!!

 

# ಸಿಲ್ವರ್:

ಸಿಲ್ವರ್ ವಸ್ತುಗಳನ್ನು ಸ್ವಚ್ಛಗೊಳಿಸಲು ನಾನಾ ಬಗೆಯ ಸರ್ಕಸ್ ಮಾಡುವುದು ಮಾಮೂಲಿ. ಟೂತ್ಪೇಸ್ಟ್ನಿಂದ ಬೆಳ್ಳಿಯ ಸಾಮಾನುಗಳನ್ನು ಪಾಲಿಶ್ ಮಾಡಬಹುದಾಗಿದೆ. ಇದಕ್ಕಾಗಿ ಟೂತ್ಪೇಸ್ಟ್ ಅನ್ನು ಬೆಳ್ಳಿಯ ಪಾತ್ರೆಗಳಿಗೆ ಹಚ್ಚಿ, ಬ್ರಶ್ನಿಂದ ಉಜ್ಜಿ, ನಂತರ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ಅನುಸರಿಸಿದರೆ ಕಪ್ಪಾಗಿರುವ ಬೆಳ್ಳಿಯ ವಸ್ತುಗಳು ಫಳ ಫಳ ಹೊಳೆಯುತ್ತವೆ.

# ಬಿಳಿ ಬೂಟು:

ಬಿಳಿ ಶೂ ಇಲ್ಲವೇ ಬೂಟುಗಳನ್ನು ಹೆಚ್ಚು ಬಳಕೆ ಮಾಡಿದ್ರೆ ಬೇಗನೆ ಸವೆಯುವುದು ಸಹಜ. ಇದನ್ನು ಮೊದಲಿನಂತೆ ಮಾಡುವುದಕ್ಕೆ ಟೂತ್ಪೇಸ್ಟ್ ಬಳಸಬಹುದು. ಒಂದು ಚಮಚ ಬಿಳಿ ಟೂತ್ಪೇಸ್ಟ್ ಮತ್ತು ಅಡಿಗೆ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಕಲೆ ಇರುವ ಜಾಗಕ್ಕೆ ಹಚ್ಚಬೇಕು. ಇದರ ಮೇಲೆ ಒದ್ದೆ ಮಾಡಿದ ಬ್ರಶ್ ನಿಂದ ಉಜ್ಜಿಕೊಂಡು ಒದ್ದೆ ಬಟ್ಟೆಯಿಂದ ಒರೆಸಿದರೆ ಬಿಳಿ ಶೂ ಹೊಳೆಯುವುದನ್ನು ಗಮನಿಸಬಹುದು.

 

#ಮೊಬೈಲ್ ಪ್ಯಾನೆಲ್ ಕವರ್:

ಮೊಬೈಲ್ ಪ್ಯಾನೆಲ್ ಕವರ್ಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅದನ್ನು ಸ್ವಚ್ಛಗೊಳಿಸಲು ಟೂತ್ಪೇಸ್ಟ್ ಬಳಸಬಹುದು. ನಿಮ್ಮ ಫೋನಿನ ಕವರ್ ಮೇಲೆ ಸ್ವಲ್ಪ ನೀರು ಚಿಮುಕಿಸಿಕೊಂಡು ಬಿಳಿ ಪೇಸ್ಟ್ ಹಚ್ಚಿ ಉಜ್ಜಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಇದಾದ ಬಳಿಕ ನೀರಿನಿಂದ ತೊಳೆಯಿರಿ.

 

# ಕಾಫಿ ಕಲೆ: ಕಾಫಿ ಕಪ್ ಕೈ ಜಾರಿ ನೆಲದ ಮೇಲೆ ಬಿದ್ದಾಗ ಗೋಡೆಯ ಮೇಲೆ ಆ ಕಲೆಗಳಾದರೆ ಅದನ್ನು ತೆಗೆಯುವುದು ಸುಲಭದ ಮಾತಲ್ಲ. ಈ ಕಲೆಗಳನ್ನು ತೆಗೆಯಲು ಟೂತ್ಪೇಸ್ಟ್ ಬಳಸಬಹುದು. ಗೋಡೆಯ ಮೇಲಿನ ಕಾಫಿ-ಟೀ ಕಲೆಗಳನ್ನು ಹೋಗಲಾಡಿಸಲು ಕಲೆಗಳ ಮೇಲೆ ಟೂತ್ ಪೇಸ್ಟ್ ಹಚ್ಚಿಕೊಂಡು ಬ್ರಶ್ನಿಂದ ಉಜ್ಜಬೇಕು. ಇದಾದ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿದರೆ ಕಲೆಗಳು ಮಾಯವಾಗುತ್ತವೆ.

You may also like

Leave a Comment