Home » Abhishek Bacchan – Aishwaya: ವಿಚ್ಛೇದನ ವಿವಾದದ ಬೆನ್ನಲ್ಲೇ ಐಶ್ವರ್ಯ ರೈ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಪತಿ ಅಭಿಷೇಕ್ ಬಚ್ಚನ್ !!

Abhishek Bacchan – Aishwaya: ವಿಚ್ಛೇದನ ವಿವಾದದ ಬೆನ್ನಲ್ಲೇ ಐಶ್ವರ್ಯ ರೈ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಪತಿ ಅಭಿಷೇಕ್ ಬಚ್ಚನ್ !!

13,608 comments
Abhishek Bacchan - Aishwaya

Abhishek Bacchan – Aishwaya: ಮಾಜಿ ವಿಶ್ವ ಸುಂದರಿ ಮತ್ತು ಯಶಸ್ವಿ ಬಾಲಿವುಡ್ ನಟಿ ಆಗಿರುವ ಐಶ್ವರ್ಯಾ ರೈ ಬಚ್ಚನ್ ಸದಾ ಸೋಷಿಯಲ್ ಮೀಡಿಯಾ ದಲ್ಲಿ ಸುದ್ದಿಯಾಗುತ್ತ ಇರುತ್ತಾರೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ (Abhishek Bacchan – Aishwaya) ಡಿವೋರ್ಸ್ ಪಡೆಯಲು ಸಿದ್ಧರಾಗಿದ್ದಾರೆ ಎಂದು ವದಂತಿ ಹಬ್ಬುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಬೆನ್ನಲ್ಲೇ ಈ ಹಿಂದೆ ಐಶ್ವರ್ಯಾ ರೈ ಅವರನ್ನು ಸೂಪರ್ ಮಾಮ್ ಎಂದು ಅಭಿಷೇಕ್ ಕರೆದಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

ಈಗಾಗಲೇ ಸುದ್ದಿ ಸಂಸ್ಥೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯಾ ರೈ ಅವರ ತೂಕ ಹೆಚ್ಚಳದ ಬಗ್ಗೆ ಮಾತನಾಡುತ್ತಾ, “ಅವಳು ತಾಯಿಯಾದಾಗ ಅವಳ ವೃತ್ತಿಜೀವನದಲ್ಲಿ ಹಿನ್ನಡೆ ಕಂಡುಬಂತು. ಆದರೆ ಆಕೆ ಆರಾಧ್ಯಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದಳು. ಆರಾಧ್ಯ ಹುಟ್ಟಿದ ಕೂಡಲೇ ಆಕೆಯ ತೂಕ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ಏನೇನೋ ಬರೆದಾಗ ಅದು ನನ್ನನ್ನು ನಿಜವಾಗಿಯೂ ಅಸಮಾಧಾನಗೊಳಿಸಿತು. ಆದರೆ ಆಕೆ ಮಾತ್ರ ಯಾವುದಕ್ಕೂ ಚಿಂತೆ ಮಾಡದೇ ಆ ಸಮಯದಲ್ಲಿ ಜಿಮ್‌’ನಲ್ಲಿ ಒಂದು ದಿನವೂ ಕಳೆದಿರಲಿಲ್ಲ” ಎಂದು ಹೇಳಿದ್ದಾರೆ.

ಮತ್ತಷ್ಟು ಮಾತನಾಡಿದ ಅಭಿಷೇಕ್ ಬಚ್ಚನ್, “ ಐಶ್ವರ್ಯಾ ಎಂದಿಗೂ ಯಾವುದರ ಬಗ್ಗೆಯೂ ಕಂಪ್ಲೈಟ್ ಮಾಡುವುದಿಲ್ಲ. ಯಾವಾಗಲೂ ದಯೆ ಮತ್ತು ಸಹಾನುಭೂತಿಯಿಂದ ಇರುತ್ತಾರೆ. ಅದು ನನಗೆ ಆಶ್ಚರ್ಯ ತಂದಿದೆ” ಎಂದು ಹೇಳಿದರು.

ಇದನ್ನು ಓದಿ: The smart ones: ಬುದ್ಧಿವಂತರು ನಿಜವಾಗಿಯೂ ಹೇಗಿರುತ್ತಾರೆ ಗೊತ್ತಾ?! ಇಲ್ಲಿದೆ ನೋಡಿ ನೀವಂದುಕೊಂಡದಕ್ಕೆ ವಿರುದ್ಧವಾದ ವಿಚಾರ !!

You may also like

Leave a Comment