Home » Condom rules: ಹೋಟೇಲ್ ಗಳಲ್ಲಿ ಫ್ರೀ ಕಾಂಡೋಮ್ ಕಡ್ಡಾಯ- ಸರ್ಕಾರದ ಹೊಸ ಆದೇಶ !!

Condom rules: ಹೋಟೇಲ್ ಗಳಲ್ಲಿ ಫ್ರೀ ಕಾಂಡೋಮ್ ಕಡ್ಡಾಯ- ಸರ್ಕಾರದ ಹೊಸ ಆದೇಶ !!

1 comment
Condom rules

Condom Rules: ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಗಟ್ಟಲು ಹಾಗೂ ಜನನ ನಿಯಂತ್ರಣಕ್ಕಾಗಿ ಕಾಂಡೋಮ್, ನಿರೋಧ್ ಹಾಗೂ ಮಾತ್ರೆಗಳನ್ನು ಬಳಸುವುದು ಸಾಮಾನ್ಯ ವಿಚಾರ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸ್ಪ್ರೇ ಹಾಗೂ ಜಲ್ ಅಂತಹ ಹೊಸ ರೂಪಗಳು ಕೂಡ ಬಂದಿದೆ. ಇದೆಲ್ಲವನ್ನೂ ದೈಹಿಕವಾಗಿ ಸಂಪರ್ಕಿಸುವವರು ಕೊಂಡುಕೊಳ್ಳುತ್ತಾರೆ. ಆದರೆ ಇಲ್ಲೊಂದೆಡೆ ಸರ್ಕಾರವು ಹೋಟೆಲ್ ಗಳಲ್ಲಿ ಕಡ್ಡಾಯವಾಗಿ ಎಲ್ಲರಿಗೂ ಉಚಿತವಾಗಿ ಕಾಂಡೋಮ್ ನೀಡಬೇಕೆಂದು ಆದೇಶ(Condom Rules)ಹೊರಡಿಸಿದೆ.

ಹೌದು, ಉಗಾಂಡ(Uganda) ದೇಶದಲ್ಲಿ ಲೈಂಗಿಕವಾಗಿ ಹರಡುವಂತಹ ಸೋಂಕುಗಳನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ವಿಶೇಷ ಕ್ರಮವನ್ನು ತಗೆದುಕೊಂಡಿದ್ದು ಈ ದೇಶದ ಪ್ರತಿಯೊಂದು ಹೋಟೆಲ್ ರೂಮ್​​​ಗಳಲ್ಲಿಯೂ ಕಡ್ಡಾಯವಾಗಿ ಫ್ರೀ ಕಾಂಡೋಮ್​​​ಗಳನ್ನು ಇಟ್ಟಿರಲೇಬೇಕಂತೆ. ಇದು ಸರ್ಕಾರ ಹೊಸ ನಿಯಮವಂತೆ.

ಅಂದಹಾಗೆ ಈ ಮಾಹಿತಿಪೂರ್ಣ ವಿಡಿಯೋವನ್ನು ಟ್ರಾವೆಲ್ ವ್ಲಾಗರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಹೋಟೆಲ್​​​​ಗಳಲ್ಲಿ ತಂಗುವ ದಂಪತಿಗಳ ಸಲುವಾಗಿ ಇಲ್ಲಿನ ಪ್ರತಿಯೊಂದು ಹೋಟೆಲ್​​​​ಗಳಲ್ಲಿ ಫ್ರೀ ಕಾಂಡೋಮ್​​​ಗಳನ್ನು ಇಡಲಾಗಿದೆ. ಈ ವೈರಲ್ ವಿಡಿಯೋವನ್ನು ಶಬೀರ್ ಅಹಮದ್ (@thepaktrekker) ಎಂಬ ಟ್ರಾವೆಲ್ ವ್ಲಾಗರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ 19.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 360K ಲೈಕ್ಸ್​​​ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ: Indian parliament : ಸಂಸತ್ ಭದ್ರತಾ ವಿಚಾರ – ಚುನಾವಣೆ ಹೊತ್ತಲ್ಲೇ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!!

You may also like

Leave a Comment