Home » Heart Attack: ಜನರೇ ನಿರ್ಲಕ್ಷ್ಯ ಮಾಡದಿರಿ, ಉಸಿರಾಡುವಾಗಲೇ ನಿಮಗೆ ತಿಳಿಯುತ್ತೆ ಹೃದಯಾಘಾತದ ಮುನ್ನೆಚ್ಚರಿಕೆ!!!

Heart Attack: ಜನರೇ ನಿರ್ಲಕ್ಷ್ಯ ಮಾಡದಿರಿ, ಉಸಿರಾಡುವಾಗಲೇ ನಿಮಗೆ ತಿಳಿಯುತ್ತೆ ಹೃದಯಾಘಾತದ ಮುನ್ನೆಚ್ಚರಿಕೆ!!!

by Mallika
1 comment
Heart Attack

Heart Attack: ಹವಾಮಾನ ಬದಲಾಗಿದೆ. ಚಳಿಗಾಲ ಕಾಲಿಟ್ಟಾಗಿದೆ. ಆರೋಗ್ಯದ ದೃಷ್ಟಿಕೋನದಿಂದ ಎಚ್ಚರಿಕೆಯಿಂದ ಇದ್ದಷ್ಟು ಒಳ್ಳೆಯದು ಎನ್ನುವ ಕಾಲ ಇದು. ಅಂದ ಹಾಗೆ ಚಳಿಗಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ ಇದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚು. ಹೃದಯಕ್ಕೆ ರಕ್ತದ ಪೂರೈಕೆ ಕಡಿಮೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಬಹಳಷ್ಟು ಜನರಿಗೆ ಹೃದಯಾಘಾತದ ಸಣ್ಣ ಲಕ್ಷಣವಾದರೂ ಕಂಡು ಬರುತ್ತದೆ. ಅದು ಯಾವುದು ಬನ್ನಿ ತಿಳಿಯೋಣ.

ಎದೆನೋವು, ಎದೆ ಬಿಗಿಯಾದಂತೆ ಹಿಂಡುವಂತಹ ನೋವು, ಭುಜ, ತೋಳು, ಬೆನ್ನು, ಕುತ್ತಿಗೆ, ಹಲ್ಲುಗಳು, ಒಸಲು ಮತ್ತು ಹೊಟ್ಟೆ ಮೇಲೆ ವಿಪರೀತ ನೋವು, ತಲೆ ಸುತ್ತುವುದು, ಬೆವರುವುದು, ಹೃದಯದಲ್ಲಿ ವಿಪರೀತ ಉರಿ, ವಾಕರಿಕೆ ಇವೆಲ್ಲ ಲಕ್ಷಣಗಳು ನೀವು ತಿಳಿದುಕೊಂಡರೆ ಉತ್ತಮ.

ಇದನ್ನು ಓದಿ: Instagram star: 30 ಸೆಕೆಂಡ್ ವಿಡಿಯೋಗೆ 2ಲಕ್ಷ ಕೇಳ್ತಾಳಂತೆ ಗುರೂ ಈ ಇನ್‌ಸ್ಟಾ ಸ್ಟಾರ್ !! ಸೋನೂ ಗೌಡನೇ ಬೆಸ್ಟ್ ಅಂತಿದ್ದಾರೆ ಜನ !!

ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಅಸಾಧ್ಯ ಉರಿ ಕಾಣ ಸಿಗುತ್ತದೆ. ಇದನ್ನು ಅಸಿಡಿಟಿಯಿಂದ ಎಂದು ಹಲವರು ಭಾವಿಸುತ್ತಾರೆ. ಆದರೆ ಮೇಯೋ ಕ್ಲಿನಿಕ್‌ ಪ್ರಕಾರ ಮೇಲೆ ನೀಡಿದ ಲಕ್ಷಣಗಳೂ ಕಂಡು ಬರುವ ಸಾಧ್ಯತೆ ಇದೆ. ಕೆಲವು ಬಾರಿ ಮೊದಲ ಲಕ್ಷಣವೇ ಹೃದಯ ಸ್ತಂಭನ, ಇದು ತೀವ್ರವಾದರೆ ಜೀವಕ್ಕೆ ಅಪಾಯ.

ಹಾಗೆನೇ ನಿಮ್ಮ ಉಸಿರಾಟದಿಂದಲೂ ಹೃದಯಾಘಾತದ ಲಕ್ಷಣವನ್ನು ಕಂಡು ಹಿಡಿಯಬಹುದು. ಎದೆಯಲ್ಲಿ ನೋವು ಕಂಡಾಗ, ರೆಸ್ಟ್‌ ತಗೊಂಡರೂ ಪ್ರಯೋಜನವೆನಿಸುವುದಿಲ್ಲ. ಇಲ್ಲಿ ನಿಮಗೆ ಆಳವಾದ ದೀರ್ಘ ಉಸಿರಾಟ ಸಾಧ್ಯವಾಗುವುದಿಲ್ಲ. ಹೃದಯಾಘಾತವಾಗುವ ಕೆಲವು ಗಂಟೆಗಳ ಮೊದಲು, ಅಥವಾ ದಿನ, ವಾರಕ್ಕೆ ಮೊದಲೇ ಇದನ್ನು ಅನುಭವಿಸಿದವರ ಸಂಖ್ಯೆ ಹೆಚ್ಚು. ಈ ರೀತಿಯ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ನೀವು ವೈದ್ಯರ ಬಳಿ ಪರಿಶೀಲಿಸುವುದು ಉತ್ತಮ. ಹೃದಯಾಘಾತಕ್ಕೆ ಮೂಲ ಕಾರಣವೇ ಕೊಬ್ಬು. ಹೀಗಾಗಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಂಡರೆ ಆರೋಗ್ಯವು ನಿಮ್ಮ ಕೈಯಲ್ಲಿರುತ್ತದೆ.

You may also like

Leave a Comment