Home » Liquor Sale Ban: 3 ದಿನ ಮದ್ಯ ಮಾರಾಟ ನಿಷೇಧ!!

Liquor Sale Ban: 3 ದಿನ ಮದ್ಯ ಮಾರಾಟ ನಿಷೇಧ!!

by Mallika
1 comment
Liquor Ban

Liquor Ban: ಡಿ.24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಡಿ.24 ರ ಬೆಳಗ್ಗೆಯಿಂದ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಚಿಕ್ಕಮಗಳೂರಿನ ಕೆಲವು ತಾಲೂಕುಗಳಲ್ಲಿ ಮದ್ಯ ಮಾರಾಟ ನಿಷೇದ ಮಾಡಲಾಗಿದೆ.

ಚಿಕ್ಕಮಗಳೂರು ದತ್ತಪೀಠದಲ್ಲಿ ಡಿ.24,25,26 ರಂದು ದತ್ತ ಜಯಂತಿ ನಡೆಯಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ ಕೊಪ್ಪ ಶೃಂಗೇರಿ, ಎನ್‌ಆರ್‌ಪುರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಅನೇಕ ಪ್ರವಾಸಿಗರು ಕ್ರಿಸ್ಮಸ್‌ ಪ್ರಯುಕ್ತ ರಜೆ ಇದೆ. ಡಿ.25 ಕ್ರಿಸ್ಮಸ್‌, ಹಾಗೂ 23, 24 ವಾರಾಂತ್ಯ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ: Solar Eclipse and Lunar Eclipse 2024: 2024ರಲ್ಲಿ ಸಂಭವಿಸಲಿದೆ ಈ ಎರಡು ಭಯಾನಕ ಗ್ರಹಣ !! ಯಾವಾಗ ಗೊತ್ತಾ ?!

You may also like

Leave a Comment