Karnataka BJP: ಬಿಜೆಪಿ (BJP) ರಾಜ್ಯ ಘಟಕದ ಪದಾಧಿಕಾರಿಗಳ ತಂಡವನ್ನು ಹೊಸದಾಗಿ ರಚನೆ ಮಾಡಲಾಗಿದ್ದು, ಹೊಸದಾಗಿ 10 ಮಂದಿ ರಾಜ್ಯ ಉಪಾಧ್ಯಕ್ಷರನ್ನೊಳಗೊಂಡು ಉಪಾಧ್ಯಕ್ಷ, ಕಾಯದರ್ಶಿ ಸೇರಿ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಹೌದು, ರಾಜ್ಯ ಬಿಜೆಪಿ ಪದಾಧಿಕಾರಿಗಳ ಘಟಕ ಪುನಾರಚಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಅತಂತ್ರವಾಗಿದ್ದ ಬಿಜೆಪಿಗೆ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ನೇಮಕವಾದ ಬಳಿಕ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಇದೀಗ ರಾಜ್ಯದ ಪದಾಧಿಕಾರಿಗಳ ತಂಡವೂ ಹೊಸದಾಗಿ ರಚನೆಯಾಗಿದೆ.
ಯಾರಿಗೆ ಯಾವ ಸ್ಥಾನ?
ಉಪಾಧ್ಯಕ್ಷ ಸ್ಥಾನಕ್ಕೆ 10 ಮಂದಿ ಮತ್ತು ಪ್ರಧಾನ ಕಾರ್ಯುದರ್ಶಿಗಳ ಸ್ಥಾನಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
• ರಾಜ್ಯ ಬಿಜೆಪಿ ಉಪಾಧ್ಯಕ್ಷರು
ಮುರುಗೇಶ್ ನಿರಾಣಿ
ಬೈರತಿ ಬಸವರಾಜು
ರಾಜೂಗೌಡ ನಾಯಕ್
ಎನ್.ಮಹೇಶ್
ಅನಿಲ್ ಬೆನಕೆ
ಹರತಾಳು ಹಾಲಪ್ಪ
ರೂಪಾಲಿ ನಾಯಕ್
ಬಸವರಾಜ ಕೇಲಗಾರ
ಮಾಳವಿಕಾ ಅವಿನಾಶ್
ಎಂ.ರಾಜೇಂದ್ರ
• ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು
ಸುನೀಲ್ ಕುಮಾರ್
ಪಿ.ರಾಜೀವ್
ನಂದೀಶ್ ರೆಡ್ಡಿ ಪ್ರೀತಂ ಗೌಡ
• ರಾಜ್ಯ ಬಿಜೆಪಿ ಕಾರ್ಯದರ್ಶಿಗಳು
ಶೈಲೇಂದ್ರ ಬೆಲ್ದಾಳೆ
ಡಿ.ಎಸ್.ಅರುಣ್
ಬಸವರಾಜ ಮತ್ತಿಮಾಡ್
ಸಿ.ಮುನಿರಾಜು
ವಿನಯ್ ಬಿದರೆ
ಕ್ಯಾಪ್ಟನ್ ಬ್ರಿಜೇಶ್ ಚೌಟ
ಶರಣು ತಳ್ಳಿಕೇರಿ
ಲಲಿತಾ ಅನಾಪುರ
ಲಕ್ಷ್ಮಿ ಅನಾಪುರ
ಅಂಬಿಕಾ ಹುಲಿನಾಯ್ಕರ್
• ರಾಜ್ಯ ಬಿಜೆಪಿ ಖಜಾಂಚಿ
ಸುಬ್ಬ ನರಸಿಂಹ
• ಮೋರ್ಚಾಗಳಿಗೆ ಅಧ್ಯಕ್ಷರ ನೇಮಕ
ಮಹಿಳಾ ಮೋರ್ಚಾ – ಸಿ ಮಂಜುಳಾ
ಎಸ್‌ಸಿ ಮೋರ್ಚಾ – ಶಾಸಕ ಸಿಮೆಂಟ್ ಮಂಜು
ಹಿಂದುಳಿದ ವರ್ಗಗಳ ಮೋರ್ಚಾ – ರಘು ಕೌಟಿಲ್ಯ
ರೈತ ಮೋರ್ಚಾ – ಎ.ಎಸ್.ಪಾಟೀಲ್ ನಡಹಳ್ಳಿ
ಎಸ್‌ಟಿ ಮೋರ್ಚಾ – ಬಂಗಾರು ಹನುಮಂತು
ಯುವ ಮೋರ್ಚಾ – ಶಾಸಕ ಧೀರಜ್ ಮುನಿರಾಜು
ಅಲ್ಪಸಂಖ್ಯಾತರ ಮೋರ್ಚಾ – ಅನಿಲ್ ಥಾಮಸ್
ಅಂದಹಾಗೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಈ ತಂಡವನ್ನು ರಚನೆಮಾಡಿದ್ದು, ಗೆಲುವಿಗಾಗಿ ಶ್ರಮಿಸಲಿದೆ. ಅಲ್ಲದೆ ಈ ಪೈಕಿ ಕೆಲವರಿಗೆ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನೀಡಲಾಗಿದ್ದು, ಲೋಕಸಭಾ ಟಿಕೆಟ್ ನೀಡದಿರಲು ಕೂಡ ಯೋಜನೆ ರೂಪಿಸಲಾಗಿದೆ.
