Home » Malpe News: ಮೀನುಗಾರರ ಬಲೆಗೆ ಬಿದ್ದ ಭರ್ಜರಿ 400 ಕೆಜಿ ತೂಕದ ಬೃಹತ್‌ ಮೀನು!!

Malpe News: ಮೀನುಗಾರರ ಬಲೆಗೆ ಬಿದ್ದ ಭರ್ಜರಿ 400 ಕೆಜಿ ತೂಕದ ಬೃಹತ್‌ ಮೀನು!!

by Mallika
0 comments

Malpe News: ಕಡಲಾಳದಲ್ಲಿ ಸಿಗುವ ಮೀನುಗಳ ಸಂಖ್ಯೆ ಅಗಾಧ. ಅಂತಹುದೇ ಒಂದು ದೈತ್ಯ ಮೀನು ಇದೀಗ ಮೀನುಗಾರರ ಬಲೆಗೆ ಬಿದ್ದಿದೆ. ಹೌದು, ಭರ್ಜರಿ 400 ಕೆಜಿ ತೂಕದ ಬೃಹತ್‌ ಗಾತ್ರದ ಮೀನು ದೊರೆತಿದ್ದು, ಇದನ್ನು ಕಂಡು ಮೀನುಗಾರರು ಹಿರಿಹಿರಿ ಹಿಗ್ಗಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಲ್ಪೆ ಮೀನುಗಾರಿಕೆ ( Malpe News) ಬಂದರಿನಲ್ಲಿ.

ಬಲರಾಂ ಪರ್ಸೀನ್‌ ಬೋಟಿನವರಿಗೆ ಈ ಮೀನು ದೊರಕಿದೆ. ಈ ಮೀನಿನ ಹೆಸರು ಬಿಲ್‌ಫಿಸ್‌. ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂದು ಕರೆಯಲಾಗುತ್ತದೆ.

ಇದು ಸಣ್ಣ ಗಾತ್ರದಲ್ಲಿ ದೊರೆಯುವುದು ಸಾಮಾನ್ಯ. ಆದರೆ ಇಷ್ಟೊಂದು ದೊಡ್ಡ ಗಾತ್ರದಲ್ಲಿ ದೊರೆತಿರುವುದು ನಿಜಕ್ಕೂ ಆಶ್ಚರ್ಯ ಎಂದು ಮೀನುಗಾರರು ಹೇಳುತ್ತಾರೆ.

You may also like

Leave a Comment