Home » Kanpur Shocker: ಉಪನ್ಯಾಸ ನೀಡುವಾಗಲೇ ಕುಸಿದು ಬಿದ್ದು ಪ್ರಾಧ್ಯಾಪಕ ಸಾವು!

Kanpur Shocker: ಉಪನ್ಯಾಸ ನೀಡುವಾಗಲೇ ಕುಸಿದು ಬಿದ್ದು ಪ್ರಾಧ್ಯಾಪಕ ಸಾವು!

0 comments

Kanpur Shocker: ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವಾಗಲೇ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆಯೊಂದು ಐಐಟಿ ಕಾನ್ಪುರದಲ್ಲಿ(Kanpur IIT) ಶನಿವಾರ ನಡೆದಿದೆ.

ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್‌ ಖಂಡೇಕರ್‌ (53) ಎಂಬುವವರೇ ಮೃತ ಪ್ರಾಧ್ಯಾಪಕರು.

ಹಳೆಯ ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಇವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ರಕ್ತದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿರುವುದಾಗಿ ವೈದ್ಯರು ಐದು ವರ್ಷದ ಹಿಂದೆ ಖಾಂಡೇಕರ್‌ ಅವರಿಗೆ ಹೇಳಿದ್ದಾಗಿ ಆಪ್ತ ಪ್ರಾಧ್ಯಾಪಕರು ಹೇಳಿರುವುದಾಗಿ ವರದಿಯಾಗಿದೆ.

You may also like

Leave a Comment