Home » Lucknow: ಪುಲ್ವಾಮ ದಾಳಿ ಇನ್ನೊಮ್ಮೆ ರೆಡಿಯಾಗಿ ಎಂದ ಮುಸ್ಲಿಂ ವಿದ್ಯಾರ್ಥಿ; ಟ್ವಿಟ್ಟರ್‌ನಲ್ಲಿ ಪೋಸ್ಟ್‌, ಕೇಸ್‌ ದಾಖಲು!!!

Lucknow: ಪುಲ್ವಾಮ ದಾಳಿ ಇನ್ನೊಮ್ಮೆ ರೆಡಿಯಾಗಿ ಎಂದ ಮುಸ್ಲಿಂ ವಿದ್ಯಾರ್ಥಿ; ಟ್ವಿಟ್ಟರ್‌ನಲ್ಲಿ ಪೋಸ್ಟ್‌, ಕೇಸ್‌ ದಾಖಲು!!!

by Mallika
1 comment

Lucknow: ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ ಎಂದು ವಿದ್ಯಾರ್ಥಿಯೋರ್ವ ಪೋಸ್ಟ್‌ ಮಾಡಿದ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿದ್ಯಾರ್ಥಿ ಮಾಡಿದ ಈ ಪೋಸ್ಟ್‌ ವೈರಲ್‌ ಆಗಿದ್ದು, ದಿಯೋಬಂದ್‌ ಪೊಲೀಸರು ವಿದ್ಯಾರ್ಥಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಎಟಿಎಸ್‌ (ಭಯೋತ್ಪಾದನಾ ನಿಗ್ರಹ ದಳ) ವಿದ್ಯಾರ್ಥಿಯನ್ನು ತನ್ನ ಕಸ್ಟಡಿಗೆ ಪಡೆಯಲಾಗಿದೆ.

‘ಬಹುತ್ ಜಲ್ದಿ ಇನ್ ಶ ಅಲ್ಲಾ ದುಸ್ರಾ ಪುಲ್ವಾಮ ಬೀ ಹೋಗ’ ಎಂದು ಈತ ಬರೆದುಕೊಂಡಿದ್ದಾನೆ. ಮೊಹಮ್ಮದ್‌ ತಲ್ಹಾ ಮಝರ್‌ ಬಂಧಿತ ವಿದ್ಯಾರ್ಥಿ. ಈತ ಜಾರ್ಖಂಡ್‌ನ ಜೆಮ್ಶಡ್‌ಪುರದ ಸೆರೈಕೆಲಾ ನಿವಾಸಿ. ಈತ ದಿಯೋಬಂದ್‌ನ ದಾರುಲ್‌ ಉಲೂಮ್‌ ಮದ್ರಾಸದಲ್ಲಿ ಅಧ್ಯಯನ ಮಾಡುತ್ತಿದ್ದ. ಉತ್ತರ ಪ್ರದೇಶದ ಸಹ್ರಾನ್‌ಪುರ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಭಯೋತ್ಪಾದನಾ ನಿಗ್ರಹದಳದ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಯುವಕನ ಮೊಬೈಲ್‌ ಫೋನ್‌ನನ್ನು ಕೂಡಾ ಪೊಲೀಸರು ವಿಚಾರಣೆಗಾಗಿ ಪಡೆದಿರುವ ಕುರಿತು ವರದಿಯಾಗಿದೆ.

ಇದನ್ನು ಓದಿ: Teacher Misbehave: ಶಾಲಾ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಮುದ್ದಾಟ; ಕಿಸ್‌ ನೀಡಿದ ಫೋಟೋ ವೈರಲ್‌!!!

You may also like

Leave a Comment