Home » Ramanath Rai: ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡ ಹೇಳಿಕೆ ವಿವಾದ; ಕಲ್ಲಡ್ಕ ಪ್ರಭಾಕರ್‌ ಭಟ್ಟರ ಬಂಧನಕ್ಕೆ ರಮಾನಾಥ್‌ ರೈ ತೀವ್ರ ಆಗ್ರಹ!!!

Ramanath Rai: ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡ ಹೇಳಿಕೆ ವಿವಾದ; ಕಲ್ಲಡ್ಕ ಪ್ರಭಾಕರ್‌ ಭಟ್ಟರ ಬಂಧನಕ್ಕೆ ರಮಾನಾಥ್‌ ರೈ ತೀವ್ರ ಆಗ್ರಹ!!!

1 comment
Dakshina Kannada

Dakshina Kannada: ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಅಶ್ಲೀಲವಾಗಿ ಮಾತನಾಡಿದ ಕುರಿತು ಮಾಜಿ ಸಚಿವ ರಮಾನಾಥ್‌ ರೈ ಕಿಡಿಕಾರಿದ್ದಾರೆ. ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ, ಮುಸ್ಲಿಂ ಮಾತ್ರ ಅಲ್ಲ ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.

 

ಮಂಡ್ಯದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಮತ ಇದೆ ಎಂದು ಭಾವಿಸುತ್ತೇನೆ. ಪ್ರಭಾಕರ್‌ ಭಟ್ಟರ ಹೇಳಿಕೆಯನ್ನು ತಿರುಚಲಾಗಿದೆ ಎಂದು ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಆದರೆ ಅದು ಯಾವ ರೀತಿ ತಿರುಚಿದ್ದಾರೆ ಎಂದು ಅವರೇ ಹೇಳಲಿ ಎಂದು ಅವರು ರಮಾನಾಥ ರೈ ಅವರು ಸವಾಲು ಹಾಕಿದ್ದಾರೆ.

 

ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತರಲಾಗಿದೆ. ಹೀಗಾಗಿ ಅವರ ವಿರುದ್ಧ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದೆ. ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಇದನ್ನು ಸರಕಾರ ಗಮನಿಸಿ ಬಂಧಿಸಬೇಕು. ಇದು ಕೇವಲ ಮುಸ್ಲಿಂ ಹೆಣ್ಮಕ್ಕಳಿಗೆ ಮಾತ್ರ ಅಲ್ಲ, ಹಿಂದೂ ಹೆಣ್ಮಕ್ಕಳ ಡ್ರೆಸ್‌ ಕೋಡ್‌ ಬಗ್ಗೆನೂ ಮಾತನಾಡುತ್ತಾರೆ. ಹಿಂದೂ ಹೆಣ್ಮಕ್ಕಳ ಅಪಮಾನ ಮಾಡೋ ಕೆಲಸವನ್ನು ಪ್ರಭಾಕರ್‌ ಭಟ್‌ ಮಾಡಿದ್ದಾರೆ. ಕ್ರೈಸ್ತ ಸಮುದಾಯವನ್ನು ಅವರು ಈ ರೀತಿ ಹಲವು ಬಾರಿ ಮಾಡಿದ್ದಾರೆ. ಕೋಮು ದ್ವೇಷ ಹರಡಿಸಿ ರಾಜಕೀಯ ಲಾಭಕ್ಕಾಗಿ ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತಂದಿದ್ದಾರೆ ಎಂದು ಅವರು ರಮಾನಾಥ ರೈ ಅವರು ಹೇಳಿದ್ದಾರೆ.

ಇದನ್ನು ಓದಿ: Electric Car ಪರ್ಚೇಸ್ ಮಾಡ್ತೀರಾ? ಹಾಗಾದ್ರೆ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರಿ

You may also like

Leave a Comment