4
Bantwala: ದಕ್ಷಿಣ ಕನ್ನಡ ಜಿಲ್ಲೆಯ ಸೂರಿಕುಮೇರು ಸಮೀಪದ ಕಾಯರಡ್ಕ ಎಂಬಲ್ಲಿ ಗುಡ್ಡ ಜರಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆಯೊಂದು ನಡೆದಿದೆ.
ಜೆಸಿಂತಾ ಮಾರ್ಟಿನ್ ಎಂಬುವವರ ಮನೆಯ ಕಾಂಪೌಂಡ್‌ನ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗುಡ್ಡ ಜರಿದು ಬಿದ್ದಿದೆ. ರಾಜೇ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಎಂಬುವವರು ಮಣ್ಣಿನಡಿ ಸಿಲುಕಿದ ಕಾರ್ಮಿಕರು.
ಇವರನ್ನು ಕೂಡಲೇ ಸ್ಥಳೀಯರು ರಕ್ಷಣೆ ಮಾಡಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬಂದಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: New Rules: ಜನವರಿ 1ರಿಂದ ಹೊಸ ನಿಯಮಗಳು ಜಾರಿ, ಈಗಲೇ ನೀವು ಎಚ್ಚೆತ್ತುಕೊಳ್ಳಿ!
