Home » Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ದೇಶಾದ್ಯಂತ ಬಂತು ಹೊಸ ರೂಲ್ಸ್ – ಇನ್ಮುಂದೆ ಡ್ರೈವಿಂಗ್ ಟೆಸ್ಟ್ ಅಗತ್ಯವೇ ಇಲ್ಲ !!

Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ದೇಶಾದ್ಯಂತ ಬಂತು ಹೊಸ ರೂಲ್ಸ್ – ಇನ್ಮುಂದೆ ಡ್ರೈವಿಂಗ್ ಟೆಸ್ಟ್ ಅಗತ್ಯವೇ ಇಲ್ಲ !!

by ಹೊಸಕನ್ನಡ
1 comment
Driving Licence

Driving Licence: ವಾಹನ ಸವಾರರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಯಾವುದೇ ವಾಹನವಾದರು ಡ್ರೈವಿಂಗ್ ಲೈಸೆನ್ಸ್ (driving licence) ಅವಶ್ಯಕ. ಚಾಲನಾ ಪರವಾನಿಗೆ ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರು (traffic police) ದಂಡ ವಿಧಿಸುವುದು ಕಾಮನ್. ಹೀಗಾಗಿ, ವಾಹನ ಹೊಂದಿದ ಪ್ರತಿಯೊಬ್ಬರು ಚಾಲನಾ ಪರವಾನಿಗೆ ಹೊಂದಿರಬೇಕು.

ಈ ಚಾಲನಾ ಪರವಾನಿಗೆ ಪಡೆಯಲು ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಟೆಸ್ಟ್ ಡ್ರೈವ್ (test drive) ನೀಡಬೇಕಾಗುತ್ತದೆ. ವಾಹನ ಸವಾರರಿಗೆ ಚಾಲನೆ ಬರುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆಯಾದ ಸಂದರ್ಭ ಚಾಲನಾ ಪರವಾನಿಗೆ ನೀಡಲಾಗುತ್ತದೆ. ಆದರೆ ಈ ಚಾಲನಾ ಪರವಾನಿಗೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆ ಮಾಡಿದೆ.

ಚಾಲನಾ ಪರವಾನಿಗೆ ಪಡೆಯಲು ಇನ್ನೂ ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡಬೇಕಾಗಿಲ್ಲ. ಕೇಂದ್ರ ಸರ್ಕಾರ ಚಾಲನಾ ಪರವಾನಿಗೆ ನಿಯಮವನ್ನು ಸರಳಗೊಳಿಸಿದ್ದು,ಚಾಲನಾ ಪರವಾನಿಗೆ ಪಡೆಯಲು ಇರುವ ಶರತ್ತುಗಳನುಸಾರ ಈಗ ನೀವು ಆರ್ಟಿಒ (RTO) ಹೋಗಿ ಯಾವುದೇ ರೀತಿಯ ಟೆಸ್ಟ್ ಡ್ರೈವ್ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನು ಓದಿ: Sukanya Samriddhi yojana: ಸುಕನ್ಯಾ ಸಮೃದ್ಧಿ ಬಡ್ಡಿ ದರದಲ್ಲಿ ಏರಿಕೆ – ಕೇಂದ್ರದಿಂದ ಹೊಸ ವರ್ಷಕ್ಕೆ ಮತ್ತೊಂದು ಗಿಫ್ಟ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಅನುಸಾರ,ನೀವು ಆರ್ಟಿಒ ಕಚೇರಿಗೆ ತೆರಳಬೇಕಾದ ಅವಶ್ಯಕತೆಯಿಲ್ಲ. ಇನ್ಮುಂದೆ ಪ್ರತಿಷ್ಠಿತ ಡ್ರೈವಿಂಗ್ ಸ್ಕೂಲ್ (driving school) ಅಥವಾ ತರಬೇತಿ ಕೇಂದ್ರದ (training centre) ಮೂಲಕವೇ ಚಾಲನಾ ಪರವಾನಿಗೆ ಪಡೆದುಕೊಳ್ಳಬಹುದು. ಅರ್ಜಿದಾರರು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ತರಬೇತಿ ಪಡೆದ ಕೇಂದ್ರದಿಂದಲೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು

# ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳ ತರಬೇತಿ ಕೇಂದ್ರ ನಡೆಸಲು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು. # ಮಧ್ಯಮ ಮತ್ತು ಭಾರಿ ವಾಹನಗಳ ತರಬೇತಿ ಕೇಂದ್ರಗಳು ಎರಡು ಎಕರೆ ಜಮೀನು ಹೊಂದಿರಬೇಕು.
# ತರಬೇತಿ ನೀಡುವವರು ಕನಿಷ್ಠ 5ವರ್ಷಗಳ ಚಾಲನಾ ಅನುಭವ ಪಡೆದಿರಬೇಕು
#ಲಘು ಮೋಟಾರು ವಾಹನಗಳ ಕೋರ್ಸ್‌ ನಡೆಸಲು ನಾಲ್ಕು ವಾರವರೆಗೆ ಅನುವು ಮಾಡಿಕೊಡಲಾಗಿದೆ.

You may also like

Leave a Comment