Home » Udupi ಯ ಪ್ರಸಿದ್ಧ ಬಟ್ಟೆ ಮಳಿಗೆಯೊಂದರಲ್ಲಿ ಮಿಸ್‌ ಫೈರಿಂಗ್‌ ; ಓರ್ವ ಗಂಭೀರ!

Udupi ಯ ಪ್ರಸಿದ್ಧ ಬಟ್ಟೆ ಮಳಿಗೆಯೊಂದರಲ್ಲಿ ಮಿಸ್‌ ಫೈರಿಂಗ್‌ ; ಓರ್ವ ಗಂಭೀರ!

0 comments

Udupi: ನಗರದ ಪ್ರಸಿದ್ಧ ಬಟ್ಟೆ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಫೈರಿಂಗ್‌ ಆದ ಘಟನೆಯೊಂದು ನಡೆದಿದ್ದು, ಈ ಘಟನೆಯಲ್ಲಿ ಸಿಬ್ಬಂದಿಯೋರ್ವರು ತೀವ್ರವಾಗಿ ಗಾಯಗೊಂಡ ಕುರಿತು ವರದಿಯಾಗಿದೆ.

ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್‌ವೊಂದು ಪತ್ತೆಯಾಗಿತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಅಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಕೂಡಲೇ ಅಲ್ಲೇ ಇದ್ದ ಸಿಬ್ಬಂದಿಗೆ ಗುಂಡು ತಾಗಿದೆ. ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ಕೂಡಲೇ ಸಿಬ್ಬಂದಿಯನ್ನು ದಾಖಲು ಮಾಡಲಾಗಿದೆ.

ಉಡುಪಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗನ್‌ ಯಾರದ್ದು, ಇದು ಮಳಿಗೆಗೆ ಹೇಗೆ ಬಂತು ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

You may also like

Leave a Comment