Home » Crime News: ಚಿತ್ರದುರ್ಗದಲ್ಲಿ ಐದು ಅಸ್ಥಿ ಪಂಜರ ಪತ್ತೆಯಾದ ಕೇಸ್‌ಗೆ ರೋಚಕ ಟ್ವಿಸ್ಟ್‌!!!

Crime News: ಚಿತ್ರದುರ್ಗದಲ್ಲಿ ಐದು ಅಸ್ಥಿ ಪಂಜರ ಪತ್ತೆಯಾದ ಕೇಸ್‌ಗೆ ರೋಚಕ ಟ್ವಿಸ್ಟ್‌!!!

0 comments
Chitradurga News

Chitradurga News: ಚಿತ್ರದುರ್ಗದಲ್ಲಿ ಐದು ಅಸ್ಥಿಪಂಜರಗಳು ದೊರಕಿದ ಕೇಸ್‌ಗೆ ರೋಚಕ ಟ್ವಿಸ್ಟೊಂದ ದೊರಕಿದೆ. ಐದರಲ್ಲಿ ಎರಡು ಅಸ್ಥಿಪಂಜರ ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಓರ್ವ ಪುರುಷ, ಓರ್ವ ಮಹಿಳೆಯ ಕಾಲಿಗೆ ಹಗ್ಗ ಬಿಗಿಯಲಾಗಿದೆ. ಇದರಿಂದಾಗಿ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌ ದೊರಕಿದಂತಾಗಿದೆ.

ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕಾಲು ಮತ್ತು ಕುತ್ತಿಗೆಯ ಭಾಗಕ್ಕೆ ಹಗ್ಗವನ್ನು ಕಟ್ಟಲಾಗಿದೆ ಎಂದು ಮಾಧ್ಯಮ ಪ್ರಸಾರ ಮಾಡಿದೆ. ಇದರಿಂದಾಗಿ ಹೊರಗಡೆಯಿಂದ ಬಂದಂತಹ ವ್ಯಕ್ತಿ ಅಥವಾ ದುಷ್ಕರ್ಮಿಗಳು ಕೊಲೆ ಮಾಡಿ, ಹಗ್ಗ ಬಿಗಿದು ಹೋದ್ರಾ ಎಂಬ ಅನುಮಾನ ಮೂಡುತ್ತಿದೆ. ಓರ್ವ ಹೆಂಗಸಿನ ಮತ್ತು ಗಂಡಸಿನ ಕಾಲಿಗೆ ಹಗ್ಗ ಬಿಗಿಯಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಸದ್ಯ ಘಟನಾ ಸ್ಥಳದಲ್ಲೇ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆರಳಚ್ಚು ತಜ್ಞರು ಬೀಡು ಬಿಟ್ಟಿದ್ದಾರೆ. ಸದ್ಯ ಜಗನ್ನಾಥ ರೆಡ್ಡಿ ಮನೆ ಹಾಲ್‌ನ ಗೋಡೆ ಮೇಲೆ ಐದು ಕೈ ಗುರುತುಗಳು ಪತ್ತೆಯಾಗಿದೆ. ರಕ್ತದ ಮಾದರಿಯಲ್ಲಿ ಗೋಡೆ ಮೇಲೆ ಕೈ ಗುರುತುಗಳು ಪತ್ತೆಯಾಗಿದೆ. ಐದು ಅಸ್ಥಿಪಂಜರ ಜೊತೆಗೆ ಐದು ಕೈ ಗುರುತಿನ ಹಿಂದಿನ ರಹಸ್ಯವನ್ನು ಕಲೆಹಾಕುವಲ್ಲಿ ಪೊಲೀಸ್‌ ತಂಡ ನಿರತವಾಗಿದೆ.

ಸದ್ಯ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೇಸ್‌ ಕುರಿತು ಪೊಲೀಸರಿಂದ ಹಲವರ ವಿಚಾರಣೆ ನಡೆಸುತ್ತಿದ್ದಾರೆ. ಎಸ್‌ಪಿ ಧರ್ಮೇಂದ್ರ ಕುಮಾರ್‌ ಮೀನಾ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

You may also like

Leave a Comment