Home » Bengaluru: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಯುವಕನ ಬರ್ಬರ ಹತ್ಯೆ – ಗೆಳೆಯನೇ ಗೆಳೆಯನನ್ನು ಕೊಂದದ್ದೇಕೆ?!

Bengaluru: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಯುವಕನ ಬರ್ಬರ ಹತ್ಯೆ – ಗೆಳೆಯನೇ ಗೆಳೆಯನನ್ನು ಕೊಂದದ್ದೇಕೆ?!

1 comment
Bengaluru

Bengaluru: ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಜಗಮಗಿಸುತ್ತಿದೆ. ಇದರ ನಡುವೆಯೇ ಯುವಕನ ಭೀಕರ ಕೊಲೆಯೊಂದು ರಾಜಧಾನಿಯಲ್ಲಿ ಸಂಭವಿಸಿದ್ದು, ಸಂಭ್ರಮವನ್ನೇ ಕದಡಿಬಿಟ್ಟಿದೆ.

ಹೌದು, ಬೆಂಗಳೂರಿನ(Bengaluru) ಹನುಮಂತ ನಗರದ 80 ಅಡಿ ರಸ್ತೆಯ ನಡುರಸ್ತೆಯಲ್ಲಿ ಈ ಭೀಕರ ಹತ್ಯೆ ನಡೆದಿದ್ದು ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಯುವಕನ ಕೊಚ್ಚಿಕೊಂದು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಹತ್ಯೆಯಾದ ಯುವಕನನ್ನು ಬನಶಂಕರಿ ಮೂಲದ ವಿಜಯ(21) ಎಂದು ಗುರುತಿಸಲಾಗಿದೆ. ಈತನು ನಿನ್ನೆ ಹೊಸವರ್ಷಾಚರಣೆ ಹಿನ್ನಲೆ ಗಳೆಯರೊಂದಿಗೆ ಸೆಲೆಬ್ರೇಷನ್ ಗೆ ಬಂದಿದ್ದು ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಕುಡಿದಿದ್ದಾರೆ. ಕಂಠಪೂರ್ತಿ ಕುಡಿದು ಮನೆಗೆ ಹೋಗುವಾಗ ವಿಜಯ್ ಹಾಗೂ ಗೆಳೆಯರ ಮಧ್ಯೆ ಜಗಳ ಶುರುವಾಗಿತ್ತು. ಆಟೋದಲ್ಲಿ ಹೋಗೋವಾಗ ಜಗಳ ಇನ್ನೂ ಜೋರಾಗಿ ವಿಜಯ್ ಎದೆಗೆ ಚಾಕು ಇರಿದು ಕೊಂದು ಬಿಸಾಕಿದ್ದಾರೆ.

ಸದ್ಯ ಸ್ಥಳಕ್ಕಾಗಮಿಸಿದ ಹನುಮಂತನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಶುರುಮಾಡಿದ್ದಾರೆ. ಸಿಸಿಟಿವಿ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

You may also like

Leave a Comment