Home » LPG Cylinder Price: LPG ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆ – ಹೊಸ ವರ್ಷಕ್ಕೆ ಮತ್ತೊಂದು ಗಿಫ್ಟ್

LPG Cylinder Price: LPG ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆ – ಹೊಸ ವರ್ಷಕ್ಕೆ ಮತ್ತೊಂದು ಗಿಫ್ಟ್

1 comment
LPG Cylinder Price

LPG Cylinder Price today: ಹೊಸ ವರ್ಷದ ಹೊಸ್ತಿಲಲ್ಲಿ ಸಾಮಾನ್ಯ ಜನತೆಗೆ ಭರ್ಜರಿ ಗುಡ್ ನ್ಯೂಸ್ (Good News)ಸಿಕ್ಕಿದ್ದು, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ(LPG Price)ಭಾರೀ ಇಳಿಕೆಯಾಗಿದ್ದು, ಈ ಮೂಲಕ ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಜನವರಿ 1ರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು(LPG Cylinder Price today)ಬಿಡುಗಡೆ ಮಾಡಿದ್ದು, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್(LPG Cylinder)ಬೆಲೆ ಇಳಿಕೆ ಕಂಡಿದೆ. 19 ಕೆಜಿ ತೂಕದ ಸಿಲಿಂಡರ್ ದರ ದೆಹಲಿಯಲ್ಲಿ 1755.50 ರೂಪಾಯಿಯಾಗಿದ್ದು,1.50 ರೂ.ಗಳಷ್ಟುದರ ಇಳಿಕೆ ಕಂಡಿದೆ.ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,839 ರೂಪಾಯಿಯಾಗಿದ್ದು, ,4 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ, 14 ಕೆಜಿ ಸಿಲಿಂಡರ್ ಬೆಲೆ 905.50 ರೂಪಾಯಿಯಾಗಿದೆ.

ಕೋಲ್ಕತ್ತಾದಲ್ಲಿ LPG ಸಿಲಿಂಡರ್ ದರ 1868.50 ರೂ. ಆಗಿದ್ದು, ಮುಂಬೈನಲ್ಲಿ 1,710 ರೂಪಾಯಿಯಾಗಿದ್ದರೆ, ಚೆನ್ನೈನಲ್ಲಿ 1929 ರೂಪಾಯಿಯಾಗಿದೆ. ಇದನ್ನು ಹೊರತುಪಡಿಸಿ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ ಆಗಸ್ಟ್ ದರವೇ ಮುಂದುವರಿದಿದ್ದು, ಸದ್ಯ, 14 ಕೆಜಿ ಸಿಲಿಂಡರ್ 903 ರೂಪಾಯಿಗೆ ಸಿಗಲಿದೆ.

ಇದನ್ನು ಓದಿ: Bengaluru: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಯುವಕನ ಬರ್ಬರ ಹತ್ಯೆ – ಗೆಳೆಯನೇ ಗೆಳೆಯನನ್ನು ಕೊಂದದ್ದೇಕೆ?!

You may also like

Leave a Comment