Home » Hubballi News: ಮುಸ್ಲಿಂ ಧರ್ಮಗುರುವಿನಿಂದ ಮತ್ತಿನ ಔಷಧಿ ಕೊಟ್ಟು ಯುವತಿ ಮೇಲೆ ನಿರಂತರ ಅತ್ಯಾಚಾರ; ತನಿಖೆ ಸಂದರ್ಭ ಭಯಾನಕ ಅಂಶ ಬಯಲು!!!

Hubballi News: ಮುಸ್ಲಿಂ ಧರ್ಮಗುರುವಿನಿಂದ ಮತ್ತಿನ ಔಷಧಿ ಕೊಟ್ಟು ಯುವತಿ ಮೇಲೆ ನಿರಂತರ ಅತ್ಯಾಚಾರ; ತನಿಖೆ ಸಂದರ್ಭ ಭಯಾನಕ ಅಂಶ ಬಯಲು!!!

1 comment

Hubballi New: ಹುಬ್ಬಳ್ಳಿ ಮೂಲದ ಯುವತಿಯೋರ್ವಳಿಗೆ ಮದರಸಾದಲ್ಲಿ ಕೆಲಸ ಕೊಟ್ಟು ನಂತರ ಆಕೆಗೆ ಮತ್ತಿನ ಔಷಧಿ ಕೊಟ್ಟು ನಿರಂತರ ಅತ್ಯಾಚಾರ ಮಾಡಿದ ಮುಫ್ತಿ ಗುಲಾಮ ಜಿಲಾನಿ ಅಜಹರಿಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂದಿಸಿದ್ದಾರೆ. ಈ ಪ್ರಕರಣದ ತನಿಖೆ ಸಂದರ್ಭ ಹಲವು ವಿಷಯಗಳು ಬೆಳಕಿಗೆ ಬಂದಿದೆ.

ಯುವತಿಯೋರ್ವಳಿಗೆ ಮತ್ತು ಬರುವ ಔಷಧಿಯನ್ನು ನೀಡಿ ಅತ್ಯಾಚಾರವೆಸಗಿದ್ದ ಆರೋಪಿ ಮುಫ್ತಿ (ಮುಸ್ಲಿಂ ಧರ್ಮ ಗುರು) ಗುಲಾಮ ಜಿಲಾರಿ ಅಜಹರಿ ಭಾರತದವನು ಅಲ್ಲ ಎಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ನೇಪಾಳದವನಾಗಿದ್ದು ಈತ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿ ನೆಲೆಸಿರುವ ಕುರಿತು ವರದಿಯಾಗಿದೆ. ಈತ ಖಂಡವಾದಲ್ಲಿ ಮದರಸಾವೊಂದನ್ನು ಪ್ರಾರಂಭ ಮಾಡಿದ್ದಾನೆ.

ಮುಫ್ತಿ ಗುಲಾಮ ಜಿಲಾನಿ ಈಗಾಗಲೇ ಎರಡು ಮದುವೆಯಾಗಿದ್ದು, ಮೊದಲ ಪತ್ನಿ ನೇಪಾಳದವನು. ಈತ ಈಗಾಗಲೇ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು ನಂತರ ನೇಪಾಳದಿಂದ ಭಾರತಕ್ಕೆ ಬಂದಿದ್ದಾನೆ. ನೇಪಾಳದಲ್ಲಿ ಈತನ ಕುಟುಂಬವಿದ್ದು ಅಲ್ಲಿಗೆ ಆಗಾಗ ಹೋಗಿ ಬರುತ್ತಿದ್ದ ಎಂದು ವರದಿಯಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲ್ಲಿ ನೆಲೆಸಿದ್ದಾನೆ.

ಇದನ್ನೂ ಓದಿ: Sullia: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವು!!!

ಏನಿದು ಘಟನೆ:
ಹುಬ್ಬಳ್ಳಿ ಮೂಲದ 23ವರ್ಷದ ಯುವತಿ, ಮಧ್ಯಪ್ರದೇಶದ ಖಂಡವಾದಲ್ಲಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆಯ ತಂದೆಗೆ ಗುಲಾಮ ಜಿಲಾನಿ ಅಜಹರಿ ಪರಿಚಯ. ಹೀಗಾಗಿ ಆತನ ಮದರಸಾದಲ್ಲಿ ಕೆಲಸ ಕೊಡಿಸಿದ್ದಾನೆ. ಹಾಗಾಗಿ ಖಂಡವಾ ಪಟ್ಟಣಕ್ಕೆ ಕರೆಸಿಕೊಂಡಿದ್ದಾನೆ.

ನಂತರ ಯುವತಿಯನ್ನು ಪುಸಲಾಯಿಸಿ ನನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದು, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಯುವತಿಗೆ ಮತ್ತು ಬರುವ ಔಷಧ ಕೊಟ್ಟು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಈ ಕುರಿತು ಸಂತ್ರಸ್ತೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

You may also like

Leave a Comment