Home » Namma Metro : ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ಮಹಿಳೆಯ ಮೊಬೈಲ್: ಮೊಬೈಲ್ಗಾಗಿ ಟ್ರ್ಯಾಕ್ ಗೆ ಹಾರಿದ ಮಹಿಳೆ: ಮುಂದೆನಾಯ್ತು??

Namma Metro : ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ಮಹಿಳೆಯ ಮೊಬೈಲ್: ಮೊಬೈಲ್ಗಾಗಿ ಟ್ರ್ಯಾಕ್ ಗೆ ಹಾರಿದ ಮಹಿಳೆ: ಮುಂದೆನಾಯ್ತು??

0 comments
Namma Metro

Namma Metro : ಬೆಂಗಳೂರಿನಲ್ಲಿ ಮೆಟ್ರೋ ಟ್ರ್ಯಾಕ್ ಸಮೀಪ ಕೆಳಗೆ ಬಿದ್ದ ಮೊಬೈಲ್ (Mobile Phone) ತೆಗೆದುಕೊಳ್ಳಲು ಮಹಿಳೆಯೊಬ್ಬರು ಜೀವವನ್ನು ಲೆಕ್ಕಿಸದೇ ಹೈವೋಲ್ಟೇಜ್ ಇರುವ ಮೆಟ್ರೋ ಟ್ರ್ಯಾಕ್‌ಗೆ ಜಿಗಿದ (Namma Metro) ಘಟನೆ ವರದಿಯಾಗಿದೆ.

ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಜನವರಿ ಒಂದರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಜನವರಿ 1ರ ಸಂಜೆ 6:40 ರ ಸುಮಾರಿಗೆ ಮಹಿಳೆಯೊಬ್ಬರು ಇಂದಿರಾನಗರದ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾರೆ. ಸಂಜೆ ವೇಳೆಗೆ ಮೆಟ್ರೊದಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಈ ನಡುವೆ ಮಹಿಳೆ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು ಪ್ಲಾಟ್‌ಫಾರಂನತ್ತ ಹೆಜ್ಜೆ ಹಾಕುವ ಸಂದರ್ಭ ಅಚಾನಕ್‌ ಆಗಿ ಮೊಬೈಲ್‌ ಟ್ರ್ಯಾಕ್‌ಗೆ ಬಿದ್ದಿದೆ.

ಇದನ್ನು ಓದಿ: Mangaluru: ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್‌!!!

ಈ ವಿಷಯವನ್ನು ಮೆಟ್ರೋ ಸಿಬ್ಬಂದಿಗೆ ತಿಳಿಸದೆ ಮೊಬೈಲ್‌ಗಾಗಿ ಟ್ರ್ಯಾಕ್‌ಗೆ ಜಿಗಿದಿದ್ದಾಳೆ. ಈ ನಡುವೆ, ಟ್ರ್ಯಾಕ್‌ಗೆ ಜಿಗಿದಿರುವುದನ್ನು ಕಂಡ ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದು, ಇದಾದ ಬಳಿಕ, ಸಹ ಪ್ರಯಾಣಿಕರ ಸಹಾಯದಿಂದ ಮಹಿಳೆಯನ್ನು ಟ್ರ್ಯಾಕ್‌ ಮೇಲಿಂದ ಎತ್ತಲಾಗಿದೆ. ಮಹಿಳೆಯಿಂದ ಸುಮಾರು 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತವಾದ ಘಟನೆ ವರದಿಯಾಗಿದೆ. ಬಿಎಂಆರ್‌ಸಿಎಲ್‌ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಗಂಡಾಂತರ ತಪ್ಪಿದೆ. ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಬರಲು ಕೆಲವೇ ನಿಮಿಷಗಳು ಬಾಕಿಯಿದ್ದಾಗ ಟ್ರ್ಯಾಕ್‌ ಮೇಲೆ ಮಹಿಳೆ ಜಿಗಿದಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿ ಯಾಗಿತ್ತು. ಅದೃಷ್ಟವಾಶತ್‌ ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ ಎನ್ನಲಾಗಿದೆ.

You may also like

Leave a Comment