Home » Chicken Kebab: ಚಪ್ಪರಿಸಿಕೊಂಡು ಕಬಾಬ್ ತಿನ್ನುತ್ತೀರಾ?! ವಕ್ಕರಿಸೀತು ಈ ರೋಗ ಹುಷಾರ್!!

Chicken Kebab: ಚಪ್ಪರಿಸಿಕೊಂಡು ಕಬಾಬ್ ತಿನ್ನುತ್ತೀರಾ?! ವಕ್ಕರಿಸೀತು ಈ ರೋಗ ಹುಷಾರ್!!

0 comments

 

Chicken kebab: ಚಿಕನ್ ಪ್ರಿಯರಲ್ಲಿ ಹೆಚ್ಚಿನವರು ಕಬಾಬ್ ಅಂದರೆ ಬಲು ಪ್ರೀತಿ. ವಾರದಲ್ಲಿ ಎರಡು ಮೂರು ಬಾರಿ ಚಿಕನ್ ತಂದು ಕಬಾಬ್(Chicken kebab)ಮಾಡಿ ತಿನ್ನುವುದುಂಟು. ಇಷ್ಟೇ ಅಲ್ಲ ಕೆಲವರಿಗೆ ಪ್ರತೀ ದಿನವೂ ಊಟದ ಜೊತೆಗೆ ಕಬಾಬ್ ಇರಲೇ ಬೇಕು. ಹೀಗೆ ನೀವು ಕೂಡ ಯಾವಾಗಲೂ ಕಬಾಬ್ ಅನ್ನು ಚಪ್ಪರಿಸಿಕೊಂಡು ತಿನ್ನುತ್ತೀರಾ? ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ.

ಮನೆಯಲ್ಲೇ ಅಪರೂಪಕ್ಕೆ ಕಬಾಬ್ ಮಾಡಿ ತಿಂದರೆ ಓಕೆ. ಆದರೆ ದಿನವೂ ಬೇಕೆಂದು ಅಂಗಡಿ, ಹೋಟೇಲ್ ಗಳಿಂದ ತಂದು ಯಾವಾಗಲೂ ಚಿಕನ್ ಕಬಾಬ್ ತಿನ್ನುತ್ತಲೆ ಇದ್ದರೆ ಇದರಿಂದ ನಿಮಗೆ ಕ್ಯಾನ್ಸರ್ ಬರಬಹುದು. ಯಾಕೆಂದರೆ ಕಬಾಬ್ ಕೆಂಪು ಬಣ್ಣಕ್ಕೆ ಬರಲು ಆರ್ಟಿಫಿಷಿಯಲ್ ಕಲರ್ ಹಾಕಿರುತ್ತಾರೆ. ಅಲ್ಲದೆ ಕರೆದೆ ಎಣ್ಮೆಯಲ್ಲೇ ವಾರಗಟ್ಟಲೆ ಕಬಾಬ್ ಮಾಡುತ್ತಾರೆ.

ಈ ಕಾರಣಗಳಿಂದಾಗಿ ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗುವುದು ಪಕ್ಕಾ. ಇದರಿಂದ ಹೃದಯ ಸಂಬಂಧಿ ಕಾಲಿಲೆಗಳೂ ನಿಮಗೆ ವಕ್ಕರಿಸೀತು ಹುಷಾರ್. ಇದಿಷ್ಟೇ ಅಲ್ಲ ಚರ್ಮದ ಖಾಲಿಯೆ ಕೂಡ ನಿಮಗಂಟಬಹುದು. ಹೀಗಾಗಿ ಕಬಾಬ್ ತಿನ್ನಬೇಕೆಂದಾಗ ನೀವೆ ಮನೆಯಲ್ಲಿ ತಂದು ಫ್ರೆಶ್ ಆಗಿ ಮಾಬಿತಿನ್ನಿ, ಲಿಮಿಟ್ ಇರಲಿ.

You may also like

Leave a Comment