Home » Belthangady: ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಯುವಕನ ಮೂಗು ಕಚ್ಚಿದ ಪ್ರಕರಣ; ಆರೋಪಿ ಅರೆಸ್ಟ್‌!!!

Belthangady: ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಯುವಕನ ಮೂಗು ಕಚ್ಚಿದ ಪ್ರಕರಣ; ಆರೋಪಿ ಅರೆಸ್ಟ್‌!!!

0 comments

Belthangady: ಬೆಳ್ತಂಗಡಿಯಲ್ಲಿ(Belthangady)ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಯುವಕನ ಮೂಗು (Nose)ಕಚ್ಚಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವೇಣೂರು ಪೊಲೀಸರು ಆರೋಪಿಯನ್ನು (Crime news)ಬಂಧಿಸಿದ್ದಾರೆ ಎಂದು ವರದಿಯಾಗಿದೆ.

 

ಹೊಸ ವರ್ಷದ ದಿನದಂದು (New Year Party) ಪಾರ್ಟಿ ವೇಳೆಗೆ ಸ್ನೇಹಿತನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಮೂಗು ಕಚ್ಚಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಆರೋಪಿ ಮೂಡಿಗೆರೆ ತಾಲೂಕಿನ ರಾಕೇಶ್ ಎಂಬಾತನನ್ನು ಬಂಧಿಸಿದ್ದಾರೆ. ರಾಕೇಶ್ ಬೆಳ್ತಂಗಡಿಯ ಪಿಲ್ಯ ಗ್ರಾಮದ ಮಾರಿಗುಡಿ ಬಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು, ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ.

 

ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಈತ ಸ್ನೇಹಿತ ದೀಕ್ಷಿತ್ ನೊಂದಿಗೆ ಗಲಾಟೆ ಮಾಡಿಕೊಂಡು ಕೋಪದ ಭರದಲ್ಲಿ ದೀಕ್ಷಿತ್ ಎಂಬ ಗೆಳೆಯನ ಮೂಗು ಕಚ್ಚಿ ಗಾಯ ಮಾಡಿದ್ದ. ಈ ಘಟನೆ ಬಳಿಕ ದೀಕ್ಷಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಪಿ ರಾಕೇಶ್ ವಿರುದ್ಧ ದೀಕ್ಷಿತ್ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಪೊಲೀಸರು ಜ.2 ರಂದು ರಾಕೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment