Home » Rohit Sharma: ಭಾರತದಲ್ಲಿ ಆಡುವಾಗ ಎಲ್ಲರೂ ಬಾಯಿ ಮುಚ್ಚಿಕೊಳ್ಳಿ- ರೋಹಿತ್‌ ಶರ್ಮಾ ಶಾಕಿಂಗ್‌ ಸ್ಟೇಟ್‌ಮೆಂಟ್‌

Rohit Sharma: ಭಾರತದಲ್ಲಿ ಆಡುವಾಗ ಎಲ್ಲರೂ ಬಾಯಿ ಮುಚ್ಚಿಕೊಳ್ಳಿ- ರೋಹಿತ್‌ ಶರ್ಮಾ ಶಾಕಿಂಗ್‌ ಸ್ಟೇಟ್‌ಮೆಂಟ್‌

2 comments

Rohit sharma on Cape town Pitch: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಏಳು ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಮೂಲಕ ಟೆಸ್ಟ್‌ ಸರಣಿಯನ್ನು 1-1 ಸಮಬಲ ಮಾಡಿತು. ಈ ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮ, ಬೌನ್ಸ್‌ ಪಿಚ್‌ ಆಟಲು ಯಾವುದೇ ಸಮಸ್ಯೆ ನಮಗೆ ಇಲ್ಲ. ಆದರೆ ಭಾರತದಲ್ಲಿ ಆಡುವಾಗ ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಅಂತರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ವಿರುದ್ಧ ಕಿಡಿಕಾರಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: ಬೆಳಗ್ಗೆ ಕೆಲಸಕ್ಕೆ ಸೇರಿ ಮಧ್ಯಾಹ್ನ ಮಗುವಿನ ಅಪಹರಣ ಮಾಡಿದ ಪ್ರಕರಣ; ಕೇಸಲ್ಲಿ ಟ್ವಿಸ್ಟ್‌, ಮಗು ಎಲ್ಲಿದೆ ಗೊತ್ತಾ?

ಇಂಡಿಯಾ ಟುಡೇ ಜೊತೆ ಮಾತನಾಡಿದ ರೋಹಿತ್‌ ಶರ್ಮಾ, “ಇಂಥಾ ಪಿಚ್‌ಗಳಲ್ಲಿ ಆಡಲು ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಭಾರತದಲ್ಲಿ ಆಡುವಾಗ ಮಾತ್ರ ಎಲ್ಲರೂ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳಬೇಕು ಹಾಗೂ ಭಾರತದ ಪಿಚ್‌ಗಳ ವಿರುದ್ಧ ದೂರ ನೀಡಬಾರದು. ನೀವು ಇಲ್ಲಿಗೆ ಬರುವುದು ನಿಮಗೆ ನೀವು ಸವಾಲು ಹಾಕಿಕೊಳ್ಳಲು. ಅದರಂತೆ ಭಾರತಕ್ಕೆ ಬಂದಾಗ ಕೂಡ ನಿಮಗೆ ಸವಾಲು ಎದುರಾಗುತ್ತದೆ,” ಎಂದು ಹೇಳಿದ್ದಾರೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ.

 

 

You may also like

Leave a Comment